ಬೈಡನ್ ಪತ್ನಿಗೆ ಕೋವಿಡ್ ಸೋಂಕು ದೃಢ

PHOTO: PTI
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಅವರು ದೆಲವೇರ್ ಬೀಚ್ನಲ್ಲಿರುವ ಕುಟುಂಬದ ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ ಎಂದು ಅಮೆರಿಕದ ಪ್ರಥಮ ಮಹಿಳೆಯ ಸಂವಹನ ನಿರ್ದೇಶಕಿ ಎಲಿಝಬೆತ್ ಅಲೆಕ್ಸಾಂಡರ್ ಹೇಳಿದ್ದಾರೆ.
ಅಧ್ಯಕ್ಷ ಬೈಡನ್ ಅವರ ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದರೂ ಅವರ ಆರೋಗ್ಯದ ಮೇಲಿನ ನಿಗಾ ಮುಂದುವರಿಯಲಿದೆ ಎಂದು ಶ್ವೇತಭವನ ಹೇಳಿಕೆ ನೀಡಿದೆ. ಜಿಲ್ ಬೈಡನ್ಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂಬ ಘೋಷಣೆಯ ಹಿಂದೆ ಗುಪ್ತ ಅಜೆಂಡಾ ಅಡಗಿದೆ, ಕೊರೋನ ಸೋಂಕು ಉಲ್ಬಣಿಸುತ್ತಿದೆ ಎಂಬ ಕಾರಣ ನೀಡಿ ಮಾಸ್ಕ್ ಧಾರಣೆ ಕಡ್ಡಾಯ ಸೇರಿದಂತೆ ಹಲವು ನಿರ್ಬಂಧ ಕ್ರಮಗಳನ್ನು ಮರು ಜಾರಿಗೊಳಿಸುವ ಉದ್ದೇಶವಿದೆ ಎಂದು ಆನ್ಲೈನ್ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story





