ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಸ್ಥಾನ ಕಳೆದುಕೊಂಡ ಬಿಲ್ ಗೇಟ್ಸ್

PC: screengrab/x.com/SizweLo
ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸ್ಥಾನ ಕಳೆದುಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯವನ್ನು ಇದೀಗ ಲೆಕ್ಕಾಚಾರ ಮಾಡಿ, ಅವರ ಮಾಜಿ ಸಹಾಯಕ, ಉತ್ತರಾಧಿಕಾರಿ ಹಾಗೂ ಮೈಕ್ರೋಸಾಫ್ಟ್ ಮಾಜಿ ಸಿಇಓ ಸ್ಟೀವ್ ಬಲ್ಮರ್ ಅವರಿಂತ ಕಡಿಮೆ ಎಂದು ಪರಿಗಣಿಸಲಾಗಿದೆ. ಗೇಟ್ಸ್ ನೀಡಿರುವ ದತ್ತಿ ಕೊಡುಗೆಗಳನ್ನು ಮರು ಎಣಿಕೆ ಮಾಡಿ ಈ ಬದಲಾವಣೆ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಗೇಟ್ ಅವರ ಸಂಪತ್ತು ಸುಮಾರು ಶೇಕಡ 30ರಷ್ಟು ಕುಸಿದಿದ್ದು, 52 ಶತಕೋಟಿ ಡಾಲರ್ನಷ್ಟು ಕಡಿಮೆಯಾಗಿದೆ.
ಮರು ಲೆಕ್ಕಾಚಾರದ ಬಳಿಕ ಗೇಟ್ಸ್ ನಿವ್ವಳ ಮೌಲ್ಯ 175 ಶತಕೋಟಿ ಡಾಲರ್ನಿಂದ 124 ಶತಕೋಟಿ ಡಾಲರ್ಗೆ ಇಳಿದಿದೆ. ಇದರಿಂದಾಗಿ ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಅವರು ಐದನೇ ಸ್ಥಾನದಿಂದ ಹನ್ನೆರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 172 ಶತಕೋಟಿ ನಿವ್ವಳ ಮೌಲ್ಯ ಹೊಂದಿರುವ ಸ್ಟೀವ್ ಬಲ್ಮೆರ್ ಐದನೇ ಸ್ಥಾನ ಪಡೆದಿದ್ದಾರೆ.
ಗೇಟ್ಸ್ ಇದೀಗ ಗೂಗಲ್ ಪಾಲುದಾರ ಅಲ್ಫಾಬೆಟ್ ನ ಸಹ ಸಂಸ್ಥಾಪಕ ಲಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್, ನಿವಿಡಾ ಇಸಿಓ ಜೆನ್ಸನ್ ಹುವಾಂಗ್ ಮತ್ತು ಧೀರ್ಘಾವಧಿಯ ಸ್ನೇಹಿತ ಬ್ರೆಸ್ಕ್ಶೀರ್ ಹ್ಯಾಥ್ವೇ ಸಿಇಓ ವಾರೆನ್ ಬಫೆಟ್ ಅವರಿಗಿಂತಲೂ ರ್ಯಾಂಕಿಂಗ್ನಲ್ಲಿ ಹಿಂದಿದ್ದಾರೆ.
ತಮ್ಮ ನಿವ್ವಳ ಸಂಪತ್ತು ಮೌಲ್ಯ 108 ಶತಕೋಟಿ ಡಾಲರ್ ಎಂದು ಬ್ಲಾಗ್ ಪೋಸ್ಟ್ನಲ್ಲಿ ಹೇಳಿಕೊಂಡಿರುವ ಗೇಟ್ಸ್, ಗೇಟ್ ಫೌಂಡೇಷನ್ ಮೂಲಕ ಮುಂದಿನ ಎರಡು ದಶಕಗಳಲ್ಲಿ ಎಲ್ಲ ಮೊತ್ತವನ್ನು ದಾನ ಮಾಡಲು ಬದ್ಧ ಎಂದು ಹೇಳಿದ್ದಾರೆ. 2045ರಲ್ಲಿ ಫೌಂಡೇಷನ್ ಮುಚ್ಚುವ ಮೊದಲು 200 ಶತಕೋಟಿ ಡಆಲರ್ ವೆಚ್ಚ ಮಾಡುವ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೌಂಡೇಷನ್ನ ವೆಬ್ಸೈಟ್ ಪ್ರಕಾರಮ ಗೇಟ್ಸ್, ಅವರ ಮಾಜಿ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು 2024ರ ಡಿಸೆಂಬರ್ನಲ್ಲಿ ಈ ಪ್ರತಿಷ್ಠಾನಕ್ಕೆ 60 ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ. ವಾರೆನ್ ಬಫೆಟ್ 43 ಶತಕೋಟಿ ಡಾಲರ್ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಮೈಕ್ರೋಸಾಫ್ಟ್ನಲ್ಲಿ ಶೇಕಡ 1ರಷ್ಟು ಷೇರು ಹೊಂದಿರುವ ಗೇಟ್ಸ್, ಷೇರಿನಿಂದ 60 ಶತಕೋಟಿ ಡಾಲರ್ ಲಾಭಾಂಶ ಪಡೆದಿದ್ದಾರೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.







