ಹಾರ್ಮುಝ್ ಜಲಸಂಧಿ ಕುರಿತು ಇರಾನ್ ಸಂಸತ್ತಿನಿಂದ ಮಸೂದೆ ಮಂಡನೆ

Photo Credit : AP , X
ಟೆಹರಾನ್, ಜು.14: ಆಯಕಟ್ಟಿನ ಹಾರ್ಮುಝ್ ಜಲಮಾರ್ಗದ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಇರಾನ್ ಸಂಸತ್ತು ಹಾರ್ಮುಝ್ ಜಲಸಂಧಿಯ ಕುರಿತಾದ ಮಸೂದೆಯೊಂದರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಭದ್ರತಾ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಅಝೀಝಿ ಮಂಗಳವಾರ ತಿಳಿಸಿದ್ದಾರೆ.
‘ಹಾರ್ಮುಝ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಭದ್ರತೆ ಹಾಗೂ ಸುಸ್ಥಿರ ಪ್ರಗತಿಗಾಗಿ ಕಾರ್ಯತಂತ್ರದ ಕ್ರಮ’ ಮಸೂದೆಯನ್ನು ಇರಾನ್ ಸಂಸತ್ತಿನಲ್ಲಿ ಅಧಿಕೃತವಾಗಿ ಮಂಡಿಸಲಾಯಿತು. ವಿಶೇಷವಾಗಿ ಹಾರ್ಮುಝ್ ಜಲಸಂಧಿಯ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ಕೆಂಪು ಗೆರೆಗಳನ್ನು (ಮಿತಿಗಳನ್ನು) ರಕ್ಷಿಸುವಲ್ಲಿ ನಾವು ದೃಢವಾಗಿದ್ದೇವೆ. ಇದು ಮೊದಲ ಹೆಜ್ಜೆ; ಮುಂದಿನ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು' ಎಂದು ಇಬ್ರಾಹಿಂ ಅಝೀಝಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story




