ಅಮೆರಿಕ | ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಆಪ್ತನ ಮೇಲೆ ಗುಂಡಿನ ದಾಳಿ

ಸಾಂದರ್ಭಿಕ ಚಿತ್ರ | Photo Credit : freepik.com
ನ್ಯೂಯಾರ್ಕ್, ಅ.20: ಅಮೆರಿಕಾದಲ್ಲಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಆಪ್ತ ಸಹಾಯಕ ಹರಿ ಬಾಕ್ಸರ್ ಮೇಲೆ ಗುಂಡಿನ ದಾಳಿ ನಡೆದಿದ್ದು ಮತ್ತೊಬ್ಬ ಕುಖ್ಯಾತ ಗ್ಯಾಂಗ್ಸ್ಟರ್ ರೋಹಿತ್ ಗೊದಾರಾ ದಾಳಿಯ ಹೊಣೆ ವಹಿಸಿಕೊಂಡಿರುವುದಾಗಿ ವರದಿಯಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿಯನ್ನು ತಾನು ಮತ್ತು ಗೋಲ್ಡಿ ಬ್ರಾರ್ ಯೋಜಿಸಿದ್ದು ಹೇಡಿ ಹರಿ ಬಾಕ್ಸರ್ ಕಾರಿನ ಸೀಟಿನಡಿ ಅಡಿ ಕುಳಿತು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಒಬ್ಬ ಸಹಚರ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹರಿ ಬಾಕ್ಸರ್ ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಆತನನ್ನು ಮುಗಿಸಿ ಬಿಡುತ್ತೇವೆ' ಎಂದು ಗೊದಾರಾ ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
Next Story





