ಬೊಲಿವಿಯಾ: ಬಸ್ಸು ದುರಂತದಲ್ಲಿ ಕನಿಷ್ಠ 37 ಮಂದಿ ಮೃತ್ಯು; 30 ಮಂದಿಗೆ ಗಾಯ

Photo Credit | X
ಸೂರ್ರೆ: ಬೊಲಿವಿಯಾದಲ್ಲಿ ಎರಡು ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದು ಇತರ 30 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಉಯೂನಿ ಮತ್ತು ಕೊಲ್ಚಾನಿ ನಗರಗಳ ನಡುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅತೀ ವೇಗದಿಂದ ಧಾವಿಸುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲಿಂದ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ಸಿಗೆ ಅಪ್ಪಳಿಸಿದೆ. ಬಳಿಕ ಎರಡೂ ಬಸ್ಸುಗಳು ರಸ್ತೆ ಪಕ್ಕದ ಮೋರಿಗೆ ಉರುಳಿ ಬಿದ್ದಿದ್ದು ಕನಿಷ್ಟ 37 ಮಂದಿ ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story





