ಬ್ರೆಝಿಲ್ ನಲ್ಲಿ ಅಧ್ಯಕ್ಷೀಯ ಚುನಾವಣೆ | ಬಹುಮತ ಪಡೆಯಲು ಬೊಲ್ಸೊನಾರೊ, ಲೂಲಾ ವಿಫಲ: `ರನ್ಆಫ್' ಚುನಾವಣೆಗೆ ವೇದಿಕೆ ಸಿದ್ಧ

Photo Credit : AP
ಬ್ರಸಿಲಿಯಾ: ಲ್ಯಾಟಿನ್ ಅಮೆರಿಕದ ಪ್ರಬಲ ಆರ್ಥಿಕತೆಯ ದೇಶವಾದ ಬ್ರೆಜಿಲ್ನಲ್ಲಿ ರವಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಿತ್ರ ಹಾಗೂ ಸಂಸದ ಫ್ಲಾವಿಯೋ ಬೊಲ್ಸೊನಾರೊ ಮತ್ತು ಬ್ರೆಝಿಲ್ನ ಹಾಲಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲೂಲಾ ಡ'ಸಿಲ್ವಾ ಅವರು ಅಕ್ಟೋಬರ್ 25 ರಂದು ನಡೆಯಲಿರುವ `ರನ್ಆಫ್' (ಎರಡನೇ ಹಂತದ ಮುಖಾಮುಖಿ) ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ನಾಲ್ಕನೇ ಬಾರಿಗೆ ಅಧ್ಯಕ್ಷರಾಗಲು ಯತ್ನಿಸುತ್ತಿರುವ 80 ವರ್ಷದ ಹಾಲಿ ಅಧ್ಯಕ್ಷ ಲೂಲಾ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ ಫ್ಲಾವಿಯೋ ಇಬ್ಬರಿಗೂ ನೇರ ಗೆಲುವಿಗೆ ಬೇಕಾದ ಬಹುಮತ ಸಿಕ್ಕಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ವರದಿಗಳ ಪ್ರಕಾರ ಬೊಲ್ಸೊನಾರೊ ಅವರು 5.6 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರೆ, ಲೂಲಾ 5.37 ಕೋಟಿ ಮತಗಳನ್ನು ಪಡೆದಿದ್ದಾರೆ. ಮುಂದಿನ ಅಧ್ಯಕ್ಷೀಯ ಅವಧಿಯು ಜನವರಿ 5 ರಿಂದ ಪ್ರಾರಂಭವಾಗಲಿದೆ.
ಬೊಲ್ಸೊನಾರೊ ಗೆದ್ದರೆ ಲ್ಯಾಟಿನ್ ಅಮೆರಿಕದಲ್ಲಿ ಅಮೆರಿಕದ ಪ್ರಭಾವ ಹೆಚ್ಚಾಗಲಿದೆ. ಒಂದು ವೇಳೆ ಲೂಲಾ ಗೆದ್ದರೆ, ಬ್ರೆಝಿಲ್ ವಾಷಿಂಗ್ಟನ್ನಿಂದ ದೂರ ಉಳಿದು ಚೀನಾ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.




