ಬೋಸ್ನಿಯಾ: ಹಿರಿಯ ನಾಗರಿಕರ ಆಶ್ರಯ ಕೇಂದ್ರದಲ್ಲಿ ಬೆಂಕಿ ದುರಂತ; 11 ಮಂದಿ ಸಾವು; 30 ಮಂದಿಗೆ ಗಾಯ

Photo Credit : AP
ಸರಜೆವೊ, ನ.5: ಬೋಸ್ನಿಯಾದಲ್ಲಿ ಹಿರಿಯ ನಾಗರಿಕರ ಆಶ್ರಯ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತುಜ್ಲಾ ಪ್ರದೇಶದ 9 ಅಂತಸ್ತಿನ ಕಟ್ಟಡದ 7ನೇ ಮಹಡಿಯಲ್ಲಿರುವ ಆಶ್ರಯ ಕೇಂದ್ರದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ಮೇಲಿನ ಅಂತಸ್ತುಗಳಿಗೂ ವ್ಯಾಪಿಸಿದೆ. ತುರ್ತು ಕಾರ್ಯಪಡೆ ಮತ್ತು ಅಗ್ನಿಶಾಮಕ ಪಡೆ ಬೆಂಕಿಯನ್ನು ನಿಯಂತ್ರಿಸಿದ್ದು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





