ಬ್ರಿಟನ್ |ಪೀಸ್ಹೆವನ್ ನಗರದಲ್ಲಿನ ಮಸೀದಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Photo Credit : x \ @Bob_cart124
ಲಂಡನ್, ಅ.5: ಬ್ರಿಟನ್ನ ಪೂರ್ವ ಸಸೆಕ್ಸ್ನಲ್ಲಿನ ಪೀಸ್ಹೆವನ್ ನಗರದಲ್ಲಿನ ಮಸೀದಿಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಶನಿವಾರ ರಾತ್ರಿ ನಡೆದಿದ್ದು ಇದನ್ನು ದ್ವೇಷಾಪರಾಧದ ಪ್ರಕರಣವೆಂದು ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.
ಶನಿವಾರ ರಾತ್ರಿ ಮಸೀದಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು ಬಾಗಿಲನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ ಬಳಿಕ ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಆ ಸಂದರ್ಭ ಮಸೀದಿಯ ಒಳಗಡೆಯಿದ್ದ ಮಸೀದಿಯ ಅಧ್ಯಕ್ಷ ಹಾಗೂ ಮತ್ತೊಬ್ಬ ವ್ಯಕ್ತಿ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಅಗ್ನಿಶಾಮಕ ತಂಡ ಬೆಂಕಿಯನ್ನು ನಿಯಂತ್ರಿಸಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ರವಿವಾರ ವರದಿ ಮಾಡಿದೆ.
Next Story





