ಬ್ರಿಟನ್: ಭಾರತದ ಹೈಕಮಿಷನ್ ಗೆ ದಾಳಿ ನಡೆಸಿದ ಶಂಕಿತ ಆರೋಪಿ ಬಂಧನ

ಲಂಡನ್: ಈ ವರ್ಷದ ಮಾರ್ಚ್ನಲ್ಲಿ ಲಂಡನ್ನಲ್ಲಿನ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಇಂಡಿಯಾ ಹೌಸ್(ಭಾರತೀಯ ಹೈಕಮಿಷನ್) ಎದುರು ನಡೆದ ಪ್ರತಿಭಟನೆ ಸಂದರ್ಭ ಬಂಧಿಸಲಾದ ವ್ಯಕ್ತಿ ಮಾರ್ಚ್ 19ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದು ಬಳಿಕ ವಿಚಾರಣೆ ಬಾಕಿ ಇರುವಂತೆಯೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈತನ ವಿರುದ್ಧ ಆರೋಪಪಟ್ಟಿ ದಾಖಲಿಸಿದ ಬಳಿಕವೇ ಹೆಸರನ್ನು ಬಹಿರಂಗಗೊಳಿಸಲಾಗುವುದು ಎಂದು ಸ್ಕಾಟ್ಲ್ಯಾಂಡ್ ಪೊಲೀಸರು ಹೇಳಿದ್ದಾರೆ.
ಮಾರ್ಚ್ 19ರಂದು ಲಂಡನ್ನಲ್ಲಿನ ಭಾರತೀಯ ಹೈಕಮಿಷನ್ಗೆ ದಾಳಿ ನಡೆಸಿದ್ದ ಖಾಲಿಸ್ತಾನಿ ಪರ ತೀವ್ರವಾದಿಗಳು ಕಟ್ಟಡದ ಮೇಲೇರಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗೆಸೆಯಲು ಪ್ರಯತ್ನಿಸಿದ್ದರು.
Next Story





