ಬ್ರಿಟನ್ನಿನ ಶಾಲೆಯಲ್ಲಿ ಚೂರಿ ಇರಿತ; 3 ಮಂದಿಗೆ ಗಾಯ
![ಬ್ರಿಟನ್ನಿನ ಶಾಲೆಯಲ್ಲಿ ಚೂರಿ ಇರಿತ; 3 ಮಂದಿಗೆ ಗಾಯ ಬ್ರಿಟನ್ನಿನ ಶಾಲೆಯಲ್ಲಿ ಚೂರಿ ಇರಿತ; 3 ಮಂದಿಗೆ ಗಾಯ](https://www.varthabharati.in/h-upload/2024/04/24/1262830-1261360-kole.webp)
ಲಂಡನ್: ಬ್ರಿಟನ್ನ ವೆಸ್ಟ್ವೇಲ್ಸ್ನ ಅಮ್ಮಾನ್ ವ್ಯಾಲಿ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ನಡೆದ ಚೂರಿ ಇರಿತ ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಸೇರಿದಂತೆ ಕನಿಷ್ಟ 3 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಯುವಕನನ್ನು ಬಂಧಿಸಲಾಗಿದೆ. ಗಾಯಗೊಂಡವರ ಹಾಗೂ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಸ್ಥಳಕ್ಕೆ ತುರ್ತು ಸೇವಾ ತಂಡವನ್ನು ರವಾನಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story