ದೇವರ ದಯೆ, ಅಮೆರಿಕ ಮಿಲಿಟರಿ ನೆರವು ನಿಲ್ಲಿಸಿಲ್ಲ: ಝೆಲೆನ್ಸ್ಕಿ

ಝೆಲೆನ್ಸ್ಕಿ | PTI
ಕೀವ್: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು 90 ದಿನಗಳವರೆಗೆ ವಿದೇಶಿ ನೆರವನ್ನು ಸ್ಥಗಿತಗೊಳಿಸುತ್ತದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ದೇವರ ದಯೆ, ಅವರು ಮಿಲಿಟರಿ ನೆರವನ್ನು ನಿಲ್ಲಿಸಿಲ್ಲ' ಎಂದಿದ್ದಾರೆ.
ನಾವು ಮಿಲಿಟರಿ ನೆರವಿನ ಬಗ್ಗೆ ಗಮನ ಹರಿಸಿದ್ದೇವೆ. ಇದನ್ನು ನಿಲ್ಲಿಸಲಾಗಿಲ್ಲ. ದೇವರಿಗೆ ಧನ್ಯವಾದಗಳು ಎಂದು ಸುದ್ದಿಗೋಷ್ಠಿಯಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ಉತ್ತಮ ರೀತಿಯ ಮಾತುಕತೆ ನಡೆಸಿದ್ದೇವೆ. ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಅವರು ಯಶಸ್ವಿಯಾಗುವ ಭರವಸೆಯಿದೆ. ಇದು ಉಕ್ರೇನ್ನೊಂದಿಗೆ ಮಾತ್ರ ಸಾಧ್ಯ. ಯಾಕೆಂದರೆ ರಶ್ಯಕ್ಕೆ ಯುದ್ಧ ನಿಲ್ಲಿಸಲು ಮನಸ್ಸಿಲ್ಲ, ಆದರೆ ಉಕ್ರೇನ್ಗೆ ಇದೆ ಎಂದು ಉಕ್ರೇನ್ ಅಧ್ಯಕ್ಷರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 2022ರಿಂದ ರಶ್ಯದ ಎದುರು ನಡೆಯುತ್ತಿರುವ ಯುದ್ಧದಲ್ಲಿ ತನ್ನ 40%ದಷ್ಟು ಮಿಲಿಟರಿ ಅಗತ್ಯಗಳಿಗೆ ಉಕ್ರೇನ್ ಅಮೆರಿಕವನ್ನು ಅವಲಂಬಿಸಿದೆ.
Next Story





