ಅಮೆರಿಕ | ಜನಸಂಖ್ಯೆಯಿಂದಲೇ ಸಮಸ್ಯೆ ಎಂದು ಹೆರಿಗೆ ಆಸ್ಪತ್ರೆಯಲ್ಲಿ ಬಾಂಬ್ ಸ್ಪೋಟಿಸಿದ ದುಷ್ಕರ್ಮಿ!

Photo credit: AP
ಕ್ಯಾಲಿಪೊರ್ನಿಯಾ: ಅಮೆರಿಕದ ಕ್ಯಾಲಿಪೊರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಬಳಿಯ ಪಾಮ್ ಸ್ಪ್ರಿಂಗ್ಸ್ ನಗರದಲ್ಲಿನ ಹೆರಿಗೆ ಆಸ್ಪತ್ರೆಯೊಂದರಲ್ಲಿ ಬಾಂಬ್ ಸ್ಪೋಟಿಸಿದ್ದ ಆರೋಪಿಯ ಗುರುತನ್ನು ಎಫ್ ಬಿ ಐ ಪತ್ತೆಹಚ್ಚಿದೆ.
ಆರೋಪಿಯನ್ನು ಲಾಸ್ ಏಂಜಲೀಸ್ ನ ಗೈ ಎಡ್ವರ್ಡ್ ಬಾರ್ಟ್ಕಸ್ (31) ಎಂದು ಗುರುತಿಸಲಾಗಿದೆ.
ಶನಿವಾರ ಪಾಮ್ ಸ್ಪ್ರಿಂಗ್ಸ್ನ ಉತ್ತರ ಭಾಗದಲ್ಲಿರುವ ಖಾಸಗಿ ಒಂದಸ್ತಿನ ಹೆರಿಗೆ ಆಸ್ಪತ್ರೆಯ ಒಪಿಡಿ ಪ್ರದೇಶದಲ್ಲಿ ಬಾಂಬ್ ಸ್ಪೋಟವಾಗಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಆರೋಪಿಯು ಘಟನಾ ಸ್ಥಳದಲ್ಲಿ ಆಡಿಯೋ ಹೇಳಿಕೆಯೊಂದನ್ನು ಬಿಟ್ಟು ಹೋಗಿದ್ದು, ‘ಈ ಜಗತ್ತು ಜನಸಂಖ್ಯೆಯಿಂದ ತುಂಬಿರಬಾರದು. ಅದರಿಂದಲೇ ಎಲ್ಲ ಸಮಸ್ಯೆ’ನ ಎಂದು ಹೇಳಿರುವುದು ಅದರಲ್ಲಿ ದಾಖಲಾಗಿದೆ. ಆತನ ಹೇಳಿಕೆಗಳಲ್ಲಿ ಮಾನವತಾ ವಿರೋಧಿ ಹೇಳಿಕೆಗಳಿವೆ ಎಂದು ಎಫ್ ಬಿ ಐ ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಫ್ ಬಿ ಐ ಆರೋಪಿಯ ಬಂಧನಕ್ಕೆ ಬಲೆ ಬೀಸಿದೆ.





