ಕೆನಡಾ | ಪಂಜಾಬಿ ಗಾಯಕನ ಮನೆಯ ಬಳಿ ಗುಂಡಿನ ದಾಳಿ

ಚನ್ನಿ ನಟ್ಟನ್ | Photo Credit : indiatoday.in
ಒಟ್ಟಾವ, ಅ.29: ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಕೆನಡಾ ನಿವಾಸದ ಹೊರಗಡೆ ಬುಧವಾರ ಗುಂಡಿನ ದಾಳಿ ನಡೆದಿದ್ದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ದಾಳಿಯ ಹೊಣೆ ವಹಿಸಿಕೊಂಡಿರುವುದಾಗಿ ವರದಿಯಾಗಿದೆ.
ನಟ್ಟನ್ ಸಹಗಾಯಕ ಸರ್ದಾರ್ ಖೇರಾ ಅವರೊಂದಿಗೆ ನಿಕಟವಾಗಿರುವುದು ದಾಳಿಗೆ ಕಾರಣ ಎಂದು ಬಿಷ್ಣೋಯಿ ಗ್ಯಾಂಗ್ ಪ್ರತಿಪಾದಿಸಿದೆ. ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
Next Story





