ಕೆನಡಾ | ಖಾಲಿಸ್ತಾನ್ ವಿರುದ್ಧ ಕ್ರಮಕ್ಕೆ ಸಂಸತ್ತಿನ ಸಭೆಯಲ್ಲಿ ಆಗ್ರಹ

Photo Credit ; NDTV
ಒಟ್ಟಾವ, ಅ.30: ಕೆನಡಾದ ಸಂಸತ್ತಿನಲ್ಲಿ ನಡೆದ ಸಭೆಯಲ್ಲಿ ಕೆನಡಾದೊಳಗೆ ಕಾರ್ಯಾಚರಿಸುವ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಹಾಗೂ ಇತರ ಸಶಸ್ತ್ರ ಗುಂಪುಗಳ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಹಲವು ಸಂಸತ್ ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಖಾಲಿಸ್ತಾನ್ ಹಾಗೂ ಇತರ ಗುಂಪುಗಳು ಒಡ್ಡಿರುವ ಬೆದರಿಕೆ ಹಾಗೂ ಈ ಗುಂಪುಗಳು ಕೆನಡಾದ ಮುಕ್ತ ಪ್ರಜಾಸತ್ತಾತ್ಮಕ ಚೌಕಟ್ಟನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಭಾರತೀಯ, ಇರಾನಿಯನ್, ಕ್ರಿಶ್ಚಿಯನ್, ಯೆಹೂದಿ,. ಕ್ಯೂಬನ್ ಮುಂತಾದ ಸಮುದಾಯಗಳನ್ನು ಪ್ರತಿನಿಧಿಸುವ 12 ಸಂಸ್ಥೆಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದವು.
ವಿದೇಶಿ ಹಸ್ತಕ್ಷೇಪ ಗಂಭೀರ ರಾಷ್ಟ್ರೀಯ ಸವಾಲನ್ನು ಒಡ್ಡುತ್ತಿವೆ. ಪ್ರತಿಕೂಲ ವಿದೇಶಿ ಪ್ರಭಾವವನ್ನು ಎದುರಿಸಲು ಮತ್ತು ಕೆನಡಾದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡಲು ಬಲವಾದ ಶಾಸಕಾಂಗ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಲಾಗಿದೆ.
Next Story





