ಕೆನಡಾದ `ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯ ಬಂಧನ

ಸಾಂದರ್ಭಿಕ ಚಿತ್ರ
ಒಟ್ಟಾವ, ನ.24: ಕೆನಡಾದ `25 ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿದ್ದ ಭಾರತೀಯ ಮೂಲದ ನಿಕೋಲಸ್ ಸಿಂಗ್(24 ವರ್ಷ)ನನ್ನು ಗನ್ ಹಾಗೂ ಮದ್ದುಗುಂಡುಗಳ ಸಹಿತ ಟೊರಂಟೋದ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ದರೋಡೆ ಹಾಗೂ ಇತರ ಅಪರಾಧ ಕೃತ್ಯಗಳಿಗಾಗಿ ಈತನಿಗೆ ಕೆನಡಾದ ನ್ಯಾಯಾಲಯ 5 ವರ್ಷ 5 ತಿಂಗಳು 10 ದಿನಗಳ ಜೈಲುಶಿಕ್ಷೆ ವಿಧಿಸಿತ್ತು. ಆದರೆ ಪರೋಲ್ ಮೇಲೆ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ನಿಕೋಲಸ್ ಸಿಂಗ್(24 ವರ್ಷ) ಶುಕ್ರವಾರ ಡ್ಯುಪೋಂಟ್ ರಸ್ತೆಯ ಬಳಿ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಾಹನದಲ್ಲಿದ್ದ ಸಿಂಗ್ ನನ್ನು ಬಂಧಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ `ಸಿಟಿ ನ್ಯೂಸ್' ವರದಿ ಮಾಡಿದೆ.
Next Story





