ಕೆನಡಾದಲ್ಲಿ ಭಾರತೀಯ ಮೂಲದ ಯೂಟ್ಯೂಬರ್ ನ್ಯಾನ್ಸಿ ಹತ್ಯೆ

ನ್ಯಾನ್ಸಿ ಗ್ರೆವಾಲ್ | Photo | Instagram
ಒಟ್ಟಾವ: ಪಂಜಾಬ್ ಮೂಲದ ಯೂಟ್ಯೂಬರ್, 25 ವರ್ಷದ ನ್ಯಾನ್ಸಿ ಗ್ರೆವಾಲ್ರನ್ನು ಕೆನಡಾದ ಒಂಟಾರಿಯೊದಲ್ಲಿ ಇರಿದು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಮಂಗಳವಾರ ರಾತ್ರಿ ಒಂಟಾರಿಯೋದ ಟಾಡ್ಲೇನ್ ಬ್ಲಾಕ್ನಲ್ಲಿ ಮಹಿಳೆಯೊಬ್ಬರು ಚೂರಿ ಇರಿತದಿಂದ ಗಂಭೀರ ಗಾಯಗೊಂಡಿರುವ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳು ನ್ಯಾನ್ಸಿ ಗ್ರೆವಾಲ್ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೆವಾಲ್ ಖಾಲಿಸ್ತಾನ್ ಪರ ಗುಂಪುಗಳ ವಿರುದ್ಧ ಮಾತನಾಡುತ್ತಿದ್ದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸುತ್ತಿದ್ದರು. ಸ್ಥಳೀಯ ಸಿಸಿ ಟಿವಿಗಳನ್ನು ಆಧರಿಸಿ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
Next Story




