ಅಮೆರಿಕ ಅಧ್ಯಕ್ಷರ ಹೆಸರಿಟ್ಟ ರಸ್ತೆಯ ಮರುನಾಮಕರಣಕ್ಕೆ ಕೆನಡಾ ಚಿಂತನೆ : ವರದಿ

Photo Credit: cbc
ಒಟ್ಟಾವ: ಕೆನಡಾದ ಒಟ್ಟಾವಾ ನಗರ ಪಾಲಿಕೆಯು ತನ್ನ ಸೆಂಟ್ರಲ್ ಪಾರ್ಕ್ ನೆರೆಹೊರೆಯಲ್ಲಿರುವ `ಟ್ರಂಪ್ ಅವೆನ್ಯೂ' ರಸ್ತೆಯ ಮರುನಾಮಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದು ವರದಿಯಾಗಿದೆ. ಈ ವಸತಿ ರಸ್ತೆಯು ಸುಮಾರು 25 ವರ್ಷಗಳಿಂದ ಟ್ರಂಪ್ ಅವರ ಹೆಸರನ್ನು ಹೊಂದಿದೆ.
ಪರಿಗಣನೆಯಲ್ಲಿರುವ ಹೆಸರುಗಳಲ್ಲಿ `ಟಾಕೋ ಅವೆನ್ಯೂ' ಒಂದಾಗಿದೆ. ಇದು ಟ್ರಂಪ್ ಅವರ ಪದೇ ಪದೇ ಬದಲಾಗುವ ರಾಜಕೀಯ ನಿಲುವುಗಳನ್ನು ಉಲ್ಲೇಖಿಸಿ, ಅಮೆರಿಕದಲ್ಲಿ ಅವರ ಬಗ್ಗೆ ಬಳಸಲಾಗುತ್ತಿತ್ತು ಎನ್ನಲಾದ ಒಂದು ಅಡ್ಡಹೆಸರಾಗಿದೆ.
`ಒಬಾಮಾ ಅವೆನ್ಯೂ' ಹೆಸರನ್ನು ಸಹ ಪರಿಗಣಿಸಲಾಗುತ್ತಿದೆ. ಟ್ರಂಪ್ ಅವರು ಒಂಟಾರಿಯೊ ಸರೋವರದ ಹೆಸರನ್ನು ` ಅಮೆರಿಕ ಸರೋವರ' ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
Next Story




