ಗೋಲ್ಡಿ ಬ್ರಾರ್ ನನ್ನು 'ಮೋಸ್ಟ್-ವಾಂಟೆಡ್' ಅಪರಾಧಿ ಎಂದು ಘೋಷಿಸಿದ ಕೆನಡಾ

ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ | PhotoCredit : TOI
ಒಟ್ಟಾವ, ನ.20: ತಲೆಮರೆಸಿಕೊಂಡಿರುವ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ನನ್ನು ಬಂಧಿಸಲು ಸಹಾಯ ಮಾಡುವ ಮಾಹಿತಿ ನೀಡಿದವರಿಗೆ 250,000 ಕೆನಡಿಯನ್ ಡಾಲರ್ (ಸುಮಾರು 1.63 ಕೋಟಿ ರೂ.) ವರೆಗೆ ಬಹುಮಾನ ನೀಡುವುದಾಗಿ ಕೆನಡಾ ಅಧಿಕಾರಿಗಳು ಘೋಷಿಸಿದ್ದಾರೆ. ಕೆನಡಾದ 25 ಮೋಸ್ಟ್-ವಾಂಟೆಡ್ (ಅತ್ಯಂತ ಬೇಕಾಗಿರುವ) ಅಪರಾಧಿಗಳ ಪಟ್ಟಿಯಲ್ಲಿ ಆತನಿಗೆ ಮೊದಲ ಸ್ಥಾನ ನೀಡಲಾಗಿದೆ.
ಸತೀಂದರ್ ಜೀತ್ ಸಿಂಗ್ ಎಂಬ ನಿಜನಾಮ ಹೊಂದಿರುವ ಬ್ರಾರ್, 2023ರ ಸೆಪ್ಟೆಂಬರ್ ನಲ್ಲಿ ವಿನ್ನಿಪೆಗ್ನಲ್ಲಿ ನಡೆದ 39 ವರ್ಷದ ಸುಖ್ ದೂಲ್ ಸಿಂಗ್ ಗಿಲ್ ಹತ್ಯೆ ಪ್ರಕರಣದಲ್ಲಿ ಪೊಲೀರಿಗೆ ಬೇಕಾಗಿದ್ದಾನೆ. ಕೆನಡಾ ಅಥವಾ ಅಮೆರಿಕದಲ್ಲಿ ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿಗೆ ಈ ಬಹುಮಾನ ಅನ್ವಯಿಸುತ್ತದೆ. ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯವಾಗುವ ಯಾವುದೇ ವಿಶ್ವಾಸಾರ್ಹ ಸುಳಿವುಗಳಿದ್ದರೆ ಹಂಚಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Next Story




