ಕೆನಡಾ: ಪಂಜಾಬಿ ಗಾಯಕ ಧಿಲ್ಲೋನ್ ಮನೆಯ ಹೊರಗೆ ಗುಂಡಿನ ದಾಳಿ

Photo Credit : Instagram/Prem Dhillon
ಒಟ್ಟಾವ: ಕೆನಡಾದಲ್ಲಿ ಪಂಜಾಬಿ ಗಾಯಕ ಪ್ರೇಮ್ ಧಿಲ್ಲೋನ್ ಅವರ ನಿವಾಸದ ಎದುರು ಸೋಮವಾರ ಗುಂಡಿನ ದಾಳಿ ನಡೆದಿದ್ದು ಈ ಕೃತ್ಯದ ಹೊಣೆ ವಹಿಸಿಕೊಂಡಿರುವುದಾಗಿ ಜೈಪಾಲ್ ಭುಲ್ಲರ್ ಗ್ಯಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಸಂಗೀತ ಉದ್ಯಮದ ಪ್ರಾಬಲ್ಯದ ಬಗ್ಗೆ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದ್ದು 2022ರಲ್ಲಿ ಪಂಜಾಬ್ನ ಮಾನ್ಸ ಜಿಲ್ಲೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಗಾಯಕ ಸಿಧು ಮೂಸೆವಾಲಾ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
Next Story