ಗಾಝಾದಿಂದ ಕ್ಯಾನ್ಸರ್ ರೋಗಿಗಳ ತಂಡ ಜೋರ್ಡಾನ್ ಗೆ ಸ್ಥಳಾಂತರ

PC ; who.int
ಅಮ್ಮಾನ್: ಗಾಝಾದಿಂದ 4 ಕ್ಯಾನ್ಸರ್ ಪೀಡಿತ ಮಕ್ಕಳು ಹಾಗೂ 12 ಕುಟುಂಬ ಸದಸ್ಯರ ತಂಡವನ್ನು ಜೋರ್ಡಾನ್ ಗೆ ಸ್ಥಳಾಂತರಿಸುವ ಕಾರ್ಯ ಬುಧವಾರ ಪ್ರಾರಂಭಗೊಂಡಿದೆ ಎಂದು ಜೋರ್ಡಾನ್ ಸರಕಾರ ಹೇಳಿದೆ.
ಗಾಝಾದ 2,000 ಮಕ್ಕಳಿಗೆ ಚಿಕಿತ್ಸೆ ನೀಡುವ ಗುರಿ ಹೊಂದಿರುವ, ಈ ವರ್ಷದ ಮಾರ್ಚ್ ನಲ್ಲಿ ಪ್ರಾರಂಭಗೊಂಡಿರುವ `ಜೋರ್ಡಾನ್ ಮೆಡಿಕಲ್ ಕಾರಿಡಾರ್ ಉಪಕ್ರಮ'ದಡಿ ಚಿಕಿತ್ಸೆಗಾಗಿ ಸ್ಥಳಾಂತರಿಸಿರುವ ಎರಡನೇ ತಂಡ ಇದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಹಕಾರದೊಂದಿಗೆ ಜೋರ್ಡಾನ್ ನ ವಾಯುಪಡೆ ವಿಮಾನದಲ್ಲಿ ಮಕ್ಕಳನ್ನು ಅವರ ಕುಟುಂಬದವರನ್ನು ಸ್ಥಳಾಂತರಿಸಲಾಗಿದ್ದು ಕಿಂಗ್ ಹುಸೇನ್ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಥಮ ತಂಡದಲ್ಲಿ 29 ಮಕ್ಕಳು ಹಾಗೂ 44 ಕುಟುಂಬ ಸದಸ್ಯರಿದ್ದರು. ಇವರಲ್ಲಿ ಚಿಕಿತ್ಸೆ ಮುಗಿಸಿದ 17 ಮಕ್ಕಳು ಗಾಝಾಕ್ಕೆ ತಮ್ಮ ಕುಟುಂಬದ ಜೊತೆ ಹಿಂದಿರುಗಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
Next Story





