ಹಾರ್ಮುಝ್ನಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ : ವರದಿ

Photo Credit : AP
ಕೈರೋ, ಆ.4: ಹಾರ್ಮುಝ್ ಜಲಸಂಧಿಯ ಒಮಾನ್ ಕರಾವಳಿಯ ಬಳಿ ಸೋಮವಾರ ತಡರಾತ್ರಿ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಬ್ರಿಟಿಷ್ ಕಡಲ ಉಸ್ತುವಾರಿ ಸಂಸ್ಥೆ (ಯುಕೆಎಂಟಿಒ) ತಿಳಿಸಿದೆ.
ಒಮಾನ್ನ ಅಲ್ ಖಸಬ್ನಿಂದ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿದ್ದಾಗ ಹಡಗಿಗೆ ಅಪರಿಚಿತ ವಸ್ತುವೊಂದು ಅಪ್ಪಳಿಸಿದ್ದು ಹಡಗಿಗೆ ಹಾನಿಯಾಗಿದೆ ಎಂದು ಯುಕೆಎಂಟಿಒ ತಿಳಿಸಿದೆ. ಆದರೆ ಆ ಹಡಗು ಯಾವ ದೇಶದ ಧ್ವಜದಡಿಯಲ್ಲಿ ಸಾಗುತ್ತಿತ್ತು ಅಥವಾ ಅದರಲ್ಲಿ ಸರಕು ಇತ್ತೇ ಎಂಬಿತ್ಯಾದಿ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
Next Story




