ಅಮೆರಿಕದ ಯೋಧರನ್ನು ಹತ್ಯೆ ಮಾಡಿದರೆ ನಗದು ಬಹುಮಾನ: ಇರಾನ್ ಘೋಷಣೆ

ಸಾಂದರ್ಭಿಕ ಚಿತ್ರ| Photo Credit : NDTV
ಟೆಹರಾನ್, ಆ.16: ಅಮೆರಿಕದ ಸೈನಿಕರನ್ನು ಹತ್ಯೆ ಮಾಡುವವರು ಅಥವಾ ಸೆರೆಹಿಡಿಯುವವರಿಗೆ 30,000 ಡಾಲರ್ಗೆ ಸಮನಾದ ಬಹುಮಾನ ನೀಡಲಾಗುವುದು ಮತ್ತು ಇದನ್ನು ಮಹಿಳೆಯರು ನೆರವೇರಿಸಿದರೆ ಬಹುಮಾನ ದ್ವಿಗುಣಗೊಳ್ಳಲಿದೆ ಎಂದು ಇರಾನ್ ಮಿಲಿಟರಿ ರವಿವಾರ ಘೋಷಿಸಿದೆ.
ಬಹುಮಾನಕ್ಕೆ ಹಣಕಾಸಿನ ನೆರವು ನೀಡಲು ಸಾರ್ವಜನಿಕರಿಂದ ಬಂದ `ಹೆಚ್ಚಿನ ಸಂಖ್ಯೆಯ ವಿನಂತಿಗಳ' ನಂತರ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ದೇಶದ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ತಿಳಿಸಿರುವುದಾಗಿ ಇರಾನ್ನ ಐಆರ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story




