ಕದನ ವಿರಾಮ ಮಾತುಕತೆ| ಪಾಕಿಸ್ತಾನಕ್ಕೆ ಬಂದಿಳಿದ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ

Photo|indiatoday
ಇಸ್ಲಮಾಬಾದ್: ಇಸ್ಲಮಾಬಾದ್ನಲ್ಲಿ ಶನಿವಾರ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಸರಕಾರಿ ವಿಮಾನದಲ್ಲಿ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಬಂದಿಳಿದಿದೆ.
ಈ ನಿಯೋಗದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಸಲಹೆಗಾರ ಜೇರೆಡ್ ಕುಶ್ನರ್ ಇದ್ದು, ಕದನ ವಿರಾಮ ಮಾತುಕತೆಯ ನೇತೃತ್ವವನ್ನು ವಹಿಸಲಿದ್ದಾರೆ.
ಇರಾನ್ ನಿಯೋಗ ಇಸ್ಲಾಮಾಬಾದ್ ತಲುಪಿದ ಬೆನ್ನಲ್ಲೆ ಶನಿವಾರ ಮುಂಜಾನೆ ಅಮೆರಿಕ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ.
ಇರಾನ್ ಸಂಸತ್ ಸ್ಪೀಕರ್ ಮುಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದಲ್ಲಿ ಆಗಮಿಸಿರುವ ಇರಾನ್ ನಿಯೋಗ, ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ನಲ್ಲಿ ಕದನ ವಿರಾಮದ ಕುರಿತ ಮಹತ್ವದ ಮಾತುಕತೆಯನ್ನು ನಡೆಸಲಿದೆ.
Next Story




