ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ನಿಧನ

ವಾಷಿಂಗ್ಟನ್ ಡಿಸಿ: ಕಾಮಿಡಿ ದಂತಕಥೆ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್ ಚಾಪ್ಲಿನ್ ಅವರು 74 ನೇ ವಯಸ್ಸಿನಲ್ಲಿ ನಿಧನರಾದರು.
ಅಮೆರಿಕ ಮೂಲದ ಮೀಡಿಯಾ ಔಟ್ ಲೆಟ್ ವರೈಟಿ ಪ್ರಕಾರ, ಚಾಪ್ಲಿನ್ ಜುಲೈ 13 ರಂದು ಪ್ಯಾರಿಸ್ನಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.
ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್ ಚಾಪ್ಲಿನ್ ಅವರು ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ'ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು. ಜೋಸೆಫೀನ್ ತನ್ನ ತಂದೆಯೊಂದಿಗೆ 1952 ಲೈಮ್ಲೈಟ್ ನಲ್ಲಿ ಚಿಕ್ಕ ವಯಸ್ಸಿನಲ್ಲಿ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು.
ಜೋಸೆಫೀನ್ ತನ್ನ ಮೂವರು ಗಂಡು ಮಕ್ಕಳುಗಳನ್ನು ಅಗಲಿದ್ದಾರೆ ವೆರೈಟಿ ವರದಿ ಮಾಡಿದೆ
Next Story