ಅಲಾಸ್ಕಾದಲ್ಲಿ ಚಾರ್ಟರ್ ವಿಮಾನ ಪತನ; 8 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | ndtv
ಆಂಕಾರೇಜ್: ಪಶ್ಚಿಮ ಅಲಾಸ್ಕಾದಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಫೆಡರಲ್ ವಾಯುಯಾನ ಮತ್ತು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಸೆಸ್ನಾ 441 ವಿಮಾನವು ಆಂಕಾರೇಜ್ ನಿಂದ ಕೇಪ್ ನ್ಯೂವೆನ್ ಹ್ಯಾಮ್ ಗೆ ತೆರಳುತ್ತಿತ್ತು. ಆಂಕಾರೇಜ್ನಿಂದ ಸುಮಾರು 450 ಮೈಲು ನೈಋತ್ಯದಲ್ಲಿರುವ ಕೇಪ್ ನ್ಯೂವೆನ್ಹ್ಯಾಮ್ ಸಮೀಪ ಗುರುವಾರ ಮಧ್ಯಾಹ್ನ 12.15ರ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಫೆಡರಲ್ ವಾಯುಯಾನ ಆಡಳಿತ (FAA) ತಿಳಿಸಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ಗಳು ಮತ್ತು ಆರು ಪ್ರಯಾಣಿಕರು ಇದ್ದರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (NTSB) ಅಲಾಸ್ಕಾ ಪ್ರದೇಶದ ಮುಖ್ಯಸ್ಥ ಕ್ಲಿಂಟ್ ಜಾನ್ಸನ್ ತಿಳಿಸಿದ್ದಾರೆ. ಭದ್ರತಾ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿದ್ದ ಚಾರ್ಟರ್ ವಿಮಾನ ಇದಾಗಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ.




