ರಾಸಾಯನಿಕ ಸೋರಿಕೆ: ಕೆಂಟುಕಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್ : ಅಮೆರಿಕದ ಕೆಂಟುಕಿ ರಾಜ್ಯದ ರಾಕ್ಕ್ಯಾಸಲ್ ನಗರದ ಬಳಿ ಹಳಿತಪ್ಪಿ ಉರುಳಿಬಿದ್ದ ರೈಲಿನಿಂದ ರಾಸಾಯನಿಕ ಸೋರಿಕೆಯಾದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದಾಗಿ ಮೇಯರ್ ಆ್ಯಂಡಿ ಬೆಷಿಯರ್ ಪ್ರಕಟಿಸಿದ್ದಾರೆ.
ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿದ್ದ ರೈಲು ಪೂರ್ವ ಕೆಂಟುಕಿಯ ರಾಕ್ಕ್ಯಾಸಲ್ ನಗರದ ಸಮೀಪ ಹಳಿತಪ್ಪಿ ಉರುಳಿದ ಕಾರಣ ರಾಸಾಯನಿಕ ಸೋರಿಕೆಯಾಗಿದೆ. ರೈಲಿನ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದು ಚಿಕಿತ್ಸೆ ಒದಗಿಸಲಾಗಿದೆ. ನಗರದ ಒಂದು ಮನೆಯನ್ನು ತೆರವುಗೊಳಿಸಿದ್ದು ಇನ್ನಷ್ಟು ಮನೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ನಗರದ ಬಳಿಯ ಲಿವಿಂಗ್ಸ್ಟೋನ್ ಪ್ರದೇಶದಲ್ಲಿರುವ ಸುಮಾರು 200 ನಿವಾಸಿಗಳನ್ನು ತಕ್ಷಣ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಿದ್ದು ಸ್ಥಳೀಯ ಮಾಧ್ಯಮಿಕ ಶಾಲೆಯೊಂದರಲ್ಲಿ ತಾತ್ಕಾಲಿಕ ಶಿಬಿರ ತೆರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





