ಅಮೆರಿಕಾದ ಹಡಗುಗಳ ಮೇಲಿನ ವಿಶೇಷ ಬಂದರು ಶುಲ್ಕ ರದ್ದುಗೊಳಿಸಿದ ಚೀನಾ

Photo: AFP
ಬೀಜಿಂಗ್, ನ.11: ಅಮೆರಿಕಾವು ಚೀನಾದ ಹಡಗುಗಳನ್ನು ಗುರಿಯಾಗಿಸಿದ ಸುಂಕಗಳನ್ನು ತಡೆಹಿಡಿದ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಅಮೆರಿಕಾದ ಹಡಗುಗಳ ಮೇಲಿನ ವಿಶೇಷ ಬಂದರು ಶುಲ್ಕವನ್ನು ಅಮಾನತುಗೊಳಿಸುವುದಾಗಿ ಚೀನಾ ಸೋಮವಾರ ಹೇಳಿದೆ.
ನವೆಂಬರ್ 10ರಿಂದ ಬಂದರು ಶುಲ್ಕ ಅಮಾನತು ಜಾರಿಗೆ ಬಂದಿರುವುದಾಗಿ ಚೀನಾದ ಸಾರಿಗೆ ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಮೆರಿಕಾ ಮತ್ತು ಚೀನಾಗಳ ನಡುವೆ ಕೆಲ ತಿಂಗಳಿಂದ ವ್ಯಾಪಾರ ಮತ್ತು ಸುಂಕ ಯುದ್ಧ ಮುಂದುವರಿದಿತ್ತು ಮತ್ತು ಒಂದು ಹಂತದಲ್ಲಿ ಎರಡೂ ದೇಶಗಳು ಪರಸ್ಪರರ ವಿರುದ್ಧ 100%ಕ್ಕೂ ಅಧಿಕ ದರದ ಸುಂಕ ಜಾರಿಗೊಳಿದ್ದವು. ಇದರಿಂದ ವಿಶ್ವದ ಎರಡು ಅತೀ ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರಕ್ಕೆ ಅಡ್ಡಿಯಾಗಿತ್ತು. ಆದರೆ ಕಳೆದ ತಿಂಗಳು ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾದ ಬಳಿಕ ಕೆಲವು ದಂಡನಾತ್ಮಕ ಕ್ರಮಗಳನ್ನು ಹಿಂಪಡೆಯಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು.
Next Story





