Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಎಲ್‌ಎಸಿಯಲ್ಲಿನ ಖಾಲಿ ‘ರಕ್ಷಣಾ...

ಎಲ್‌ಎಸಿಯಲ್ಲಿನ ಖಾಲಿ ‘ರಕ್ಷಣಾ ಗ್ರಾಮ’ಗಳಿಗೆ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿರುವ ಚೀನಾ; ವರದಿ

ಭಾರತದ ಈಶಾನ್ಯ ಗಡಿಗಳ ಸಮೀಪದಲ್ಲಿರುವ ‘ಷಿಯಾವೊಕಾಂಗ್’ ಗ್ರಾಮಗಳಲ್ಲಿ ನೆಲೆಸತೊಡಗಿದ ಚೀನಿ ಪ್ರಜೆಗಳು

ವಾರ್ತಾಭಾರತಿವಾರ್ತಾಭಾರತಿ15 Feb 2024 4:45 PM IST
share
ಎಲ್‌ಎಸಿಯಲ್ಲಿನ ಖಾಲಿ ‘ರಕ್ಷಣಾ ಗ್ರಾಮ’ಗಳಿಗೆ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿರುವ ಚೀನಾ; ವರದಿ

ಹೊಸದಿಲ್ಲಿ: ಚೀನಿ ಪ್ರಜೆಗಳು ಭಾರತದ ಈಶಾನ್ಯ ಗಡಿಗಳ ಸಮೀಪದಲ್ಲಿರುವ ತಮ್ಮ ಮಾದರಿ ‘ಷಿಯಾವೊಕಾಂಗ್’ ಗ್ರಾಮಗಳಲ್ಲಿ ನೆಲೆಸತೊಡಗಿದ್ದಾರೆ. ಚೀನಾ 2019ರಿಂದಲೇ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯುದ್ದಕ್ಕೂ ಈ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು indianexpress.com ವರದಿ ಮಾಡಿದೆ.

ಚೀನಿಯರು ಕಳೆದ ಕೆಲವು ತಿಂಗಳುಗಳಿಂದ ಅರುಣಾಚಲ ಪ್ರದೇಶದ ಲೋಹಿತ್ ಕಣಿವೆ ಮತ್ತು ತವಾಂಗ್ ವಿಭಾಗದ ಎಲ್‌ಎಸಿಯ ಆಚೆಯ ತಮ್ಮ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇಂತಹ ಎರಡು ಗ್ರಾಮಗಳಲ್ಲಿ ನೆಲೆಸತೊಡಗಿದ್ದಾರೆ ಎಂದು ವಿಷಯವನ್ನು ಬಲ್ಲ ಕೆಲವು ಅಧಿಕಾರಿಗಳು ತಿಳಿಸಿದರು.

ಚೀನಾ ಕಳೆದ ಐದು ವರ್ಷಗಳಿಂದ ಲಡಾಖ್ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯುದ್ದಕ್ಕೂ ಇಂತಹ 628 ಸುಸಜ್ಜಿತ ಗ್ರಾಮಗಳನ್ನು ನಿರ್ಮಿಸುತ್ತಿದೆ.

ಈ ಗ್ರಾಮಗಳ ನಿಖರವಾದ ಸ್ವರೂಪ ಅಸ್ಪಷ್ಟವಾಗಿದ್ದರೂ ಇವು ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ದ್ವಿ ಬಳಕೆಯ ಮೂಲಸೌಕರ್ಯಗಳು ಎಂದು ಭಾವಿಸಲಾಗಿದೆ ಮತ್ತು ಎಲ್‌ಎಸಿಯುದ್ದಕ್ಕೂ ತನ್ನ ಪ್ರಾದೇಶಿಕ ಹಕ್ಕುಗಳ ಚೀನಿ ಪ್ರತಿಪಾದನೆಯಂತೆ ಕಂಡು ಬರುತ್ತಿದೆ. ಹೀಗಾಗಿ ಈ ಗ್ರಾಮಗಳು ಮಿಲಿಟರಿ ಕಳವಳಗಳಾಗಿ ಉಳಿದಿವೆ.

ಈವರೆಗೆ ಎಲ್‌ಎಸಿಯುದ್ದಕ್ಕೂ ಈ ಗ್ರಾಮಗಳ ಭಾಗವಾಗಿ ನಿರ್ಮಿಸಲಾಗಿರುವ ಎರಡಂತಸ್ತುಗಳ, ಬೃಹತ್ ಮತ್ತು ವಿಶಾಲ ಕಟ್ಟಡಗಳು ಖಾಲಿಯಾಗಿಯೇ ಉಳಿದುಕೊಂಡಿದ್ದವು. ಕಳೆದ ಕೆಲವು ತಿಂಗಳುಗಳಿಂದ ಚೀನಿ ಪ್ರಜೆಗಳು ಇದರಲ್ಲಿ ವಾಸವಾಗತೊಡಗಿದ್ದಾರೆ. ಅವರು ನಾಗರಿಕರೇ ಅಥವಾ ಮಿಲಿಟರಿ ಸಿಬ್ಬಂದಿಗಳೇ ಎನ್ನುವುದು ತಿಳಿದು ಬಂದಿಲ್ಲ.

ತವಾಂಗ್ ಮತ್ತು ಸಿಲಿಗುರಿ ಕಾರಿಡಾರ್ ಹೊರತುಪಡಿಸಿ ಹೆಚ್ಚಿನ ಜನವಸತಿಯುಳ್ಳ ಅಥವಾ ಮಹತ್ವದ ಸ್ಥಳಗಳಿಂದ ಎಲ್‌ಎಸಿ ತುಂಬ ದೂರವಿದ್ದರೂ ಚೀನಿಯರು ಈಶಾನ್ಯರಾಜ್ಯಗಳಿಗೆ ಹೊಂದಿಕೊಂಡಿರುವ ಎಲ್‌ಸಿಯುದ್ದಕ್ಕೂ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅವರು (ಚೀನಿಯರು) ತವಾಂಗ್‌ನಲ್ಲಿ ಎಲ್‌ಎಸಿಯುದ್ದಕ್ಕೂ ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸಿದ್ದಾರೆ,ಆದರೆ ಅವರು ಅಷ್ಟಕ್ಕೇ ನಿಲ್ಲಿಸಿಲ್ಲ. ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆಯಂತಹ ಇತರ ಪ್ರದೇಶಗಳಲ್ಲಿಯೂ ಚೀನಿ ಮೂಲಸೌಕರ್ಯಗಳು ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತಿವೆ ಎಂದು ಹೇಳಿದ ಅಧಿಕಾರಿಯೋರ್ವರು,ಕಣಿವೆಗಳ ಮೂಲಕ ಸಂಪರ್ಕ ರಸ್ತೆಗಳ ಸುಧಾರಣೆ,ರಸ್ತೆಗಳು,ಸೇತುವೆಗಳು ಮತ್ತು ತಮ್ಮ ಮಾದರಿ ಗ್ರಾಮಗಳ ನಿರ್ಮಾಣ ಸೇರಿದಂತೆ ಅಸ್ತಿತ್ವದಲ್ಲಿರುವ ತಮ್ಮ ಮೂಲಸೌಕರ್ಯಗಳನ್ನು ಚೀನಿಯರು ನಿರಂತರವಾಗಿ ಉತ್ತಮಗೊಳಿಸಿದ್ದಾರೆ. ಚೀನಾ ಭೂತಾನ ಭೂಪ್ರದೇಶದಲ್ಲಿಯೂ ಗಡಿ ಗ್ರಾಮಗಳು ಸೇರಿದಂತೆ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.

ಕಳೆದ 3-4 ವರ್ಷಗಳಿಂದ ಭಾರತವೂ ತನ್ನ ಗಡಿ ಮೂಲಸೌಕರ್ಯ ಕಾಮಗಾರಿಗಳನ್ನು ಹೆಚ್ಚಿಸಿದ್ದು,ಮುಂಚೂಣಿ ಸಂಪರ್ಕ ಸುಧಾರಣೆ, ಎಲ್‌ಎಸಿಗೆ ಪರ್ಯಾಯ ರಸ್ತೆಗಳ ನಿರ್ಮಾಣ ಮತ್ತು ಅವುಗಳ ಜೋಡಣೆ ಇವುಗಳಲ್ಲಿ ಸೇರಿವೆ.

ವೈಬ್ರಂಟ್ ವಿಲೇಜಸ್ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ 663 ಗಡಿಗ್ರಾಮಗಳನ್ನು ಎಲ್ಲ ಸೌಲಭ್ಯಗಳೊಂದಿಗೆ ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಗೊಳಿಸಲು ಭಾರತವು ಯೋಜಿಸಿದೆ. ಲಡಾಖ್,ಹಿಮಾಚಲ ಪ್ರದೇಶ,ಉತ್ತರಾಖಂಡ,ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಚೀನಾ ಗಡಿಗೆ ಹೊಂದಿಕೊಂಡಿರುವ ಕನಿಷ್ಠ 17 ಇಂತಹ ಗ್ರಾಮಗಳನ್ನು ಕಾರ್ಯಕ್ರಮದಡಿ ಅಭಿವೃದ್ಧಿಗಾಗಿ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X