`ಸಾರ್ಕ್'ನ ಬದಲು ಹೊಸ ಪ್ರಾದೇಶಿಕ ಬಣ ಸ್ಥಾಪನೆಗೆ ಚೀನಾ, ಪಾಕ್, ಬಾಂಗ್ಲಾ ಪ್ರಯತ್ನ

PC | REAUTERS
ಇಸ್ಲಾಮಾಬಾದ್: ಪ್ರಾದೇಶಿಕ ಸಹಕಾರಕ್ಕಾಗಿ ದಕ್ಷಿಣ ಏಶ್ಯಾ ಸಂಘಟನೆಗೆ(ಸಾರ್ಕ್) ಬದಲಾಗಿ ಹೊಸ ಪ್ರಾದೇಶಿಕ ಬಣವನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪಾಕಿಸ್ತಾನವು ಚೀನಾದೊಂದಿಗೆ ಕೆಲಸ ಮಾಡುತ್ತಿದೆ ಎಂದು `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ದಿನಪತ್ರಿಕೆ ವರದಿ ಮಾಡಿದೆ.
ಪ್ರಾದೇಶಿಕ ಏಕೀಕರಣ ಮತ್ತು ಸಂವಹನಕ್ಕೆ ಹೊಸ ಸಂಘಟನೆಯ ಅಗತ್ಯವಿದೆ ಎಂದು ಪಾಕಿಸ್ತಾನ ಮತ್ತು ಚೀನಾಕ್ಕೆ ಮನವರಿಕೆ ಆಗಿದ್ದು ಎರಡೂ ಕಡೆಯ ನಿಯೋಗದ ನಡುವಿನ ಮಾತುಕತೆ ಮುಂದುವದಿದೆ. ಹೊಸ ಸಂಘಟನೆಯು `ಸಾರ್ಕ್' ಅನ್ನು ಬದಲಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.(ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ `ಸಾರ್ಕ್'ನ ಸದಸ್ಯ ದೇಶಗಳು).
ಚೀನಾದ ಕುನ್ಮಿಂಗ್ನಲಿ ಇತ್ತೀಚೆಗೆ ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದ ನಡುವೆ ನಡೆದ ತ್ರಿಪಕ್ಷೀಯ ಸಭೆಯು ಈ ರಾಜತಾಂತ್ರಿಕ ಉಪಕ್ರಮದ ಭಾಗವಾಗಿದೆ ಮತ್ತು `ಸಾರ್ಕ್'ನ ಭಾಗವಾಗಿರುವ ಇತರ ದಕ್ಷಿಣ ಏಶ್ಯಾ ದೇಶಗಳನ್ನು ಆಹ್ವಾನಿಸುವ ಉದ್ದೇಶವಿದೆ. ಒಂದು ವೇಳೆ ಪ್ರಸ್ತಾಪವು ಕಾರ್ಯರೂಪಕ್ಕೆ ಬಂದರೆ ಅದು `ಸಾರ್ಕ್' (ಭಾರತ-ಪಾಕಿಸ್ತಾನ ಸಂಘರ್ಷದಿಂದಾಗಿ ದೀರ್ಘಕಾಲದಿಂದ ಅಮಾನತುಗೊಂಡಿದೆ) ಅನ್ನು ಬದಲಾಯಿಸಬಹುದು ಎಂದು ವರದಿ ಹೇಳಿದೆ.





