ಸಾಧ್ಯವಾದಷ್ಟು ಬೇಗ ಇಸ್ರೇಲ್ನಿಂದ ನಿರ್ಗಮಿಸಲು ಚೀನಾದ ಪ್ರಜೆಗಳಿಗೆ ಸೂಚನೆ

Photo credit: PTI
ಬೀಜಿಂಗ್: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಇಸ್ರೇಲ್ನಲ್ಲಿರುವ ಚೀನಾ ಪ್ರಜೆಗಳು ಸಾಧ್ಯವಾದಷ್ಟು ಬೇಗ ಅಲ್ಲಿಂದ ನಿರ್ಗಮಿಸುವಂತೆ ಚೀನಾದ ರಾಯಭಾರಿ ಕಚೇರಿ ಮಂಗಳವಾರ ಆಗ್ರಹಿಸಿದೆ.
ಇಸ್ರೇಲ್-ಇರಾನ್ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದೆ. ಹೆಚ್ಚಿನ ನಾಗರಿಕ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು ನಾಗರಿಕರ ಸಾವು-ನೋವುಗಳು ಹೆಚ್ಚುತ್ತಿವೆ ಮತ್ತು ಭದ್ರತಾ ಪರಿಸ್ಥಿತಿಗಳು ಹೆಚ್ಚು ಗಂಭೀರವಾಗುತ್ತಿದೆ. ಆದ್ದರಿಂದ ಇಸ್ರೇಲ್ನಲ್ಲಿರುವ ಚೀನಾದ ಪ್ರಜೆಗಳು ಸಾಧ್ಯವಾದಷ್ಟು ಬೇಗ ಅಲ್ಲಿಂದ ನಿರ್ಗಮಿಸಬೇಕು. ಜೋರ್ಡಾನ್ನತ್ತ ತೆರಳಲು ಸಲಹೆ ನೀಡುತ್ತೇವೆ' ಎಂದು ರಾಯಭಾರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
Next Story





