ವ್ಯಾಪಾರ ಸಮರ ಅಂತ್ಯಕ್ಕೆ ಚೀನಾ ರಾಯಭಾರಿ ಆಗ್ರಹ

Photo Credit | PTI
ವಾಷಿಂಗ್ಟನ್: ವ್ಯಾಪಾರ ಸಮರ ಅಂತ್ಯಗೊಳ್ಳಬೇಕು ಮತ್ತು ಚೀನಾದೊಂದಿಗೆ ಶಾಂತಿಯುತ ಸಹಬಾಳ್ವೆಗೆ ಅಮೆರಿಕ ಮುಂದಾಗಬೇಕು ಎಂದು ಅಮೆರಿಕಕ್ಕೆ ಚೀನಾದ ರಾಯಭಾರಿ ಕ್ಸಿ ಫೆಂಗ್ ಆಗ್ರಹಿಸಿದ್ದು, ಒಂದು ವೇಳೆ ವ್ಯಾಪಾರ ಸಮರ ಉಲ್ಬಣಗೊಂಡರೆ ಪ್ರತೀಕಾರ ಕ್ರಮಕ್ಕೆ ಚೀನಾ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಚ್ಚುವರಿ ಸುಂಕಗಳು ಜಾಗತಿಕ ಆರ್ಥಿಕತೆಯನ್ನು ಧ್ವಂಸಗೊಳಿಸುತ್ತದೆ. ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವಿನ ಸಂಬಂಧವನ್ನು ಸೌಹಾರ್ದತೆ ಮಾರ್ಗದರ್ಶನ ಮಾಡಬೇಕು ಎಂದವರು ಆಗ್ರಹಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.
Next Story





