ತನ್ನ ಬೆಕ್ಕನ್ನು ಚೆನ್ನಾಗಿ ಸಾಕುವವರಿಗೆ ತನ್ನಿಡೀ ಸಂಪತ್ತನ್ನು ನೀಡುವುದಾಗಿ ಘೋಷಿಸಿದ ವೃದ್ಧ!

ಸಾಂದರ್ಭಿಕ ಚಿತ್ರ
ಬೀಜಿಂಗ್: ದಕ್ಷಿಣ ಚೀನಾ ಮೂಲದ 82 ವರ್ಷದ ವೃದ್ಧನೊಬ್ಬ ತನ್ನ ಮರಣದ ನಂತರ ಸಾಕು ಬೆಕ್ಕನ್ನು ನೋಡಿಕೊಳ್ಳುವವರಿಗೆ ತನ್ನಿಡೀ ಸಂಪತ್ತನ್ನು ಬಿಟ್ಟು ಕೊಡುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಲಾಂಗ್ ಎಂಬ ಉಪನಾಮದಿಂದ ಗುರುತಿಸಿಕೊಂಡಿರುವ ವೃದ್ಧ ದಕ್ಷಿಣ ಚೀನಾದ ಗ್ವಾಂಗ್ ಡಾಂಗ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಮಕ್ಕಳಿಲ್ಲದ ಲಾಂಗ್ ದಶಕದ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡಿದ್ದರು. ನಂತರ ಅವರು ಒಂಟಿಯಾಗಿ ಜೀವನ ಕಳೆಯುತ್ತಿದ್ದಾರೆ.
ಲಾಂಗ್ ಅವರು ಒಂದು ಮಳೆಗಾಲದಲ್ಲಿ ರಕ್ಷಿಸಿದ ನಾಲ್ಕು ಬೆಕ್ಕಿನ ಮರಿಗಳೇ ನಂತರ ಅವರ ಸಂಗಾತಿಗಳಾಗಿದ್ದವು. ಅದರಲ್ಲಿ ಈಗ ಒಂದು ಬೆಕ್ಕು ಮಾತ್ರ ಉಳಿದುಕೊಂಡಿದ್ದು, ಅದನ್ನು ನೋಡಿಕೊಳ್ಳುವವರಿಗೆ ತನ್ನಿಡೀ ಸಂಪತ್ತನ್ನು ನೀಡಲಿದ್ದಾರೆ ಎಂದು South China Morning Post ವರದಿ ಮಾಡಿದೆ.
ಕ್ಸಿಯಾಂಬ ಎಂಬ ಹೆಣ್ಣು ಬೆಕ್ಕನ್ನು ಅದರ ಜೀವಮಾನವಿಡೀ ನೋಡಿಕೊಳ್ಳುವವರಿಗೆ ತನ್ನ ಇಡೀ ಎಸ್ಟೇಟ್, ಅಪಾರ್ಟ್ಮೆಂಟ್ ಹಾಗೂ ಉಳಿತಾಯ ನೀಡುವುದಾಗಿ ಲಾಂಗ್ ಅವರು ಘೋಷಿಸಿದ್ದಾರೆ.
Next Story