ಮಿಚಿಗನ್: ಚರ್ಚ್ ನಲ್ಲಿ ಶೂಟೌಟ್; 4 ಸಾವು; 8 ಮಂದಿಗೆ ಗಾಯ

Credit: NDTV
ನ್ಯೂಯಾರ್ಕ್, ಸೆ.29: ಅಮೆರಿಕಾದ ಮಿಚಿಗನ್ ರಾಜ್ಯದ ಗ್ರ್ಯಾಂಡ್ ಬ್ಲಾಂಕ್ ನಗರದಲ್ಲಿ ವ್ಯಕ್ತಿಯೊಬ್ಬ ರವಿವಾರ ಚರ್ಚ್ನ ಬಾಗಿಲಿಗೆ ಟ್ರಕ್ ಅನ್ನು ಅಪ್ಪಳಿಸಿ ಬಳಿಕ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಟ್ರಕ್ ಅಪ್ಪಳಿಸಿದ್ದರಿಂದ ಚರ್ಚ್ ನ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಬಳಿಕ ಪೊಲೀಸರು ಶಂಕಿತ ಆರೋಪಿಯನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಯನ್ನು ಪಕ್ಕದ ಬೌರ್ಟನ್ ನಗರದ ನಿವಾಸಿ ಥಾಮಸ್ ಜಾಕೋಬ್ ಸ್ಯಾನ್ಫೋರ್ಡ್ (40 ವರ್ಷ) ಎಂದು ಗುರುತಿಸಲಾಗಿದೆ.
ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಚರ್ಚ್ ನ ಒಳಗೆ ಪರಿಶೀಲನೆ ನಡೆಸಲಾಗುತ್ತಿದ್ದು ಸಾವು ನೋವಿನ ಪ್ರಮಾಣ ಹೆಚ್ಚಬಹುದು ಎಂದು ಮೂಲಗಳು ಹೇಳಿವೆ.
Next Story





