ಅಫ್ಘಾನ್ ಪಡೆಗಳೊಂದಿಗೆ ಘರ್ಷಣೆ: 7 ಪಾಕಿಸ್ತಾನಿ ಸೈನಿಕರು ಮೃತ್ಯು

Photo Credit: indiatoday
ಕಾಬೂಲ್, ಅ.18: ವಿವಾದಿತ ಡ್ಯುರಾಂಡ್ ರೇಖೆಯ ಉದ್ದಕ್ಕೂ ಅಫ್ಘಾನ್ ಪಡೆಗಳೊಂದಿಗೆ ನಡೆದ ತೀವ್ರ ಘರ್ಷಣೆಯಲ್ಲಿ ಕನಿಷ್ಠ ಏಳು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತದ ದಂದ್ ಪಟಾನ್ ಜಿಲ್ಲೆಯಲ್ಲಿ, ನಿರ್ದಿಷ್ಟವಾಗಿ ಖರ್ಲಾಚಿ ಗೇಟ್, ಟಾಪ್ ಸರ್ ಮತ್ತು ಕೊಂಜ್ ಅಲಿ ವಲಯಗಳ ಬಳಿ ತೀವ್ರ ಸಂಘರ್ಷ ಭುಗಿಲೆದ್ದಿದೆ. ಈ ಘರ್ಷಣೆಯಿಂದ ಗಡಿಯುದ್ದಕ್ಕೂ ನಡೆಯುತ್ತಿದ್ದ ವ್ಯಾಪಾರಕ್ಕೆ ಅಡ್ಡಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಜೀವಭಯದಿಂದ ಮನೆಗಳನ್ನು ತೊರೆದು ಓಡಿಹೋಗುವಂತಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಗುಂಡಿನ ದಾಳಿಗೆ ತಮ್ಮ ಪಡೆಗಳು ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನಿ ಸೇನಾ ಸಿಬ್ಬಂದಿಗೆ ಸಾವುನೋವುಗಳು ಸಂಭವಿಸಿವೆ ಎಂದು ಅಫ್ಘಾನ್ ಭದ್ರತಾ ಮೂಲಗಳು ತಿಳಿಸಿವೆ. ಅಲ್ಲದೆ, ಪಾಕಿಸ್ತಾನ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಗಡಿ ಕಾವಲು ನೆಲೆಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿವೆ.
Next Story




