ಅಫ್ಘಾನಿಸ್ತಾನದಲ್ಲಿ ಘರ್ಷಣೆ: ನಾಲ್ವರು ಮೃತ್ಯು, ಐವರಿಗೆ ಗಾಯ

Photo credit: ANI
ಕಾಬೂಲ್, ಜ.8: ಉತ್ತರ ಅಫ್ಘಾನಿಸ್ತಾನದಲ್ಲಿ ಚಿನ್ನದ ಗಣಿ ಕಂಪನಿಯ ನಿರ್ವಾಹಕರು ಹಾಗೂ ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ 4 ಮಂದಿ ಮೃತಪಟ್ಟಿದ್ದು, ಇತರ 5 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ತಖಾರ್ ಪ್ರಾಂತದ ಚಾಹ್ ಅಬ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು ಮೂವರು ಸ್ಥಳೀಯರು ಹಾಗೂ ಕಂಪನಿಯ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ. ಕಂಪೆನಿಯ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಸ್ಥಳೀಯನನ್ನು ಬಂಂಧಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
Next Story





