ಸೂಕ್ಷ್ಮ ಮಾಹಿತಿಗಳ ಸಂಗ್ರಹ | ಟಿಕ್ ಟಾಕ್ ವಿರುದ್ಧ ಅಮೆರಿಕ ಆರೋಪ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್ : ಗರ್ಭಪಾತ ಮತ್ತು ಬಂದೂಕು ನಿಯಂತ್ರಣದಂತಹ ವಿಷಯಗಳ ಕುರಿತು ಅಮೆರಿಕದ ಬಳಕೆದಾರರ ನಿಲುವುಗಳನ್ನು ಟಿಕ್ ಟಾಕ್ ಸಂಗ್ರಹಿಸುತ್ತಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.
ಬಂದೂಕು ನಿಯಂತ್ರಣ, ಗರ್ಭಪಾತ, ಧರ್ಮದಂತಹ ಸೂಕ್ಷ್ಮ ಸಾಮಾಜಿಕ ವಿಷಯಗಳ ಬಗ್ಗೆ ವೀಕ್ಷಕರ ನಿಲುವನ್ನು ಸಂಗ್ರಹಿಸುವ ಸಾಮಥ್ರ್ಯವನ್ನು ಟಿಕ್ ಟಾಕ್ ಬಳಸಿಕೊಳ್ಳುತ್ತಿದೆ. ಟಿಕ್ ಟಾಕ್ ಉದ್ಯೋಗಿಗಳಿಗೆ ಚೀನಾದಲ್ಲಿನ ಬೈಟ್ಡ್ಯಾ ನ್ಸ್(ಚೀನಾದ ಇಂಟರ್ನೆ ಟ್ ತಂತ್ರಜ್ಞಾನ ಸಂಸ್ಥೆ) ಇಂಜಿನಿಯರ್ ಗಳ ಜತೆ ನೇರವಾಗಿ ಮಾತನಾಡಲು ಅನುವು ಮಾಡಿಕೊಡಲು ಬೈಟ್ಡ್ಯಾಸನ್ಸ್ ಸಂಸ್ಥೆಯು ಲಾರ್ಕ್ ಎಂಬ ಆಂತರಿಕ ವೆಬ್ ವ್ಯವಸ್ಥೆಯನ್ನು ಬಳಸುತ್ತಿದೆ ಎಂದು ವಾಷಿಂಗ್ಟನ್ನೈ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸರಕಾರದ ವಕೀಲರು ಉಲ್ಲೇಖಿಸಿದ್ದಾರೆ. ಟಿಕ್ ಟಾಕ್ ಉದ್ಯೋಗಿಗಳು ಲಾರ್ಕ್ ವ್ಯವಸ್ಥೆ ಬಳಸಿ ಅಮೆರಿಕದ ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದು ಇವು ಚೀನಾದ ಸರ್ವರ್ ಗಳಲ್ಲಿ ಸಂಗ್ರಹಗೊಳ್ಳುತ್ತವೆ ಮತ್ತು ಚೀನಾದಲ್ಲಿರುವ ಬೈಟ್ಡ್ಯಾಎನ್ಸ್ ಉದ್ಯೋಗಿಗಳು ಈ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಫೆಡರಲ್ ಅಧಿಕಾರಿಗಳು ಆರೋಪಿಸಿದ್ದಾರೆ.