Oman ಕೊಲ್ಲಿಯಲ್ಲಿ ವಾಣಿಜ್ಯ ನೌಕೆಯ ಮೇಲೆ ಗುಂಡಿನ ದಾಳಿ

ಸಾಂದರ್ಭಿಕ ಚಿತ್ರ | Photo Credit : PTI
ಜೆರುಸಲೇಮ್: ಇರಾನ್ ವಿರುದ್ಧದ `ನೌಕಾ ದಿಗ್ಬಂಧನವನ್ನು ' ಉಲ್ಲಂಘಿಸಿ ಈ ಪ್ರದೇಶದಿಂದ ಹೊರಹೋಗಲು ಯತ್ನಿಸಿದ `ಸೆಂಟ್ ಕಿಟ್ಸ್' ಧ್ವಜ ಹೊಂದಿದ್ದ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕದ ಸೇನೆ ತಿಳಿಸಿದೆ.
ಶನಿವಾರ ತಡರಾತ್ರಿ ಇರಾನ್ ಬಂದರಿಗೆ ಭೇಟಿ ನೀಡಿದ ನಂತರ, ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿದ ಹಲವು ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಈ ಪ್ರದೇಶದಿಂದ ಹೊರಹೋಗಲು ಯತ್ನಿಸಿದ ಹಡಗನ್ನು ಒಮಾನ್ ಕೊಲ್ಲಿಯಲ್ಲಿ ತಡೆದು ನಿಲ್ಲಿಸಲಾಗಿದೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.
Next Story




