ಆಗ್ನೇಯ ನೇಪಾಳದಲ್ಲಿ ಕೋಮು ಹಿಂಸಾಚಾರ: ಕರ್ಪ್ಯೂ ಮುಂದುವರಿಕೆ

Photo Credit : x
ಕಠ್ಮಂಡು, ಜು.31: ಆಗ್ನೇಯ ನೇಪಾಳದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಯಾವುದೇ ಹೊಸ ಅಶಾಂತಿ ಹರಡದಂತೆ ತಡೆಯಲು ಅಧಿಕಾರಿಗಳು ಹಲವು ಪಟ್ಟಣಗಳಲ್ಲಿ ಅನಿರ್ದಿಷ್ಟಾವಧಿ ಕರ್ಪ್ಯೂ ಮುಂದುವರಿಸಿದ್ದಾರೆ.
ಶುಕ್ರವಾರ ಯಾವುದೇ ಹೊಸ ಘಟನೆಗಳು ವರದಿಯಾಗಿಲ್ಲವಾದರೂ, ಈ ವಾರದ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದ ಸುನ್ಸಾರಿ ಮತ್ತು ಸಿರಾಹಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬಿಗಿ ಭದ್ರತೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story




