ಕಾಂಗೋ | ತಾಮ್ರದ ಗಣಿಯಲ್ಲಿ ಸೇತುವೆ ಕುಸಿದು ಕನಿಷ್ಠ 32 ಮಂದಿ ಮೃತ್ಯು

Photo Credit : X
ಕಿನ್ಷಾಸ, ನ.17: ಆಗ್ನೇಯ ಕಾಂಗೋದ ತಾಮ್ರದ ಗಣಿಯಲ್ಲಿ ಸೇತುವೆಯೊಂದು ಕುಸಿದು ಕನಿಷ್ಠ 32 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಲುಲಾಬಾ ಪ್ರಾಂತದ ಕಲಾಂಡೊ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಗಣಿ ಕಾರ್ಮಿಕರು ಮತ್ತು ಗಣಿಗೆ ಭದ್ರತೆ ಒದಗಿಸಿದ್ದ ಸೇನಾ ಸಿಬ್ಬಂದಿ ನಡುವೆ ಘರ್ಷಣೆಯ ಬಳಿಕ ಸೇನಾ ಸಿಬ್ಬಂದಿ ಗುಂಡಿನ ದಾಳಿಯಿಂದ ಆತಂಕಗೊಂಡ ಗಣಿ ಕಾರ್ಮಿಕರು ಕಿರಿದಾದ ಸೇತುವೆಯ ಮೂಲಕ ಧಾವಿಸಿದಾಗ ಸೇತುವೆ ಕುಸಿದು ದುರಂತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಘಟನೆಯ ಬಗ್ಗೆ ಸ್ಥಳೀಯ ಮಾನವ ಹಕ್ಕುಗಳ ಸಮಿತಿ ಕಳವಳ ವ್ಯಕ್ತಪಡಿಸಿದ್ದು ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
Next Story





