ಹಾರ್ವರ್ಡ್ ವಿವಿಯಲ್ಲಿ ಹೊಸ ವಿದೇಶೀ ವಿದ್ಯಾರ್ಥಿಗಳಿಗೆ ವೀಸಾ ನಿಷೇಧಕ್ಕೆ ಕೋರ್ಟ್ ನಿರ್ಬಂಧ

photo : twitter/@Harvard
ವಾಷಿಂಗ್ಟನ್: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಹೊಸ ವಿದೇಶೀ ವಿದ್ಯಾರ್ಥಿಗಳಿಗೆ ವೀಸಾ ನಿರ್ಬಂಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವನ್ನು ಪ್ರಶ್ನಿಸಿ ವಿವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಮೆರಿಕದ ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿದೆ.
ಹಾರ್ವರ್ಡ್ ನ ಹೊಸ ವಿದೇಶೀ ವಿದ್ಯಾರ್ಥಿಗಳು ದೇಶದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶವನ್ನು ಸರ್ಕಾರ ಜಾರಿಗೆ ತರಲು ಸಾಧ್ಯವಿಲ್ಲ. ಘೋಷಣೆ ಜಾರಿಗೆ ಬಂದರೆ ಹಾರ್ವರ್ಡ್ ತಕ್ಷಣದ ಮತ್ತು ಸರಿಪಡಿಸಲಾಗದ ಹಾನಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶರು ತೀರ್ಪು ನೀಡಿದ್ದು ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ನಿಗದಿಗೊಳಿಸಿದ್ದಾರೆ.
Next Story





