ಹೌತಿಗಳ ದಾಳಿಯ ಆತಂಕದ ನಡುವೆ 6 ತಿಂಗಳ ಗರಿಷ್ಠ ಮಟ್ಟದಿಂದ ಕುಸಿದ ಕಚ್ಚಾ ತೈಲದ ಬೆಲೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ವಾರ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದ ಕಚ್ಚಾ ತೈಲದ ಬೆಲೆಗಳು ಸೋಮವಾರ ಬೆಳಿಗ್ಗೆ ಇಳಿಕೆಯಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ಬೆಳಿಗ್ಗೆ 5.48ರ ವೇಳೆಗೆ ಅಮೆರಿಕದ ಕಚ್ಚಾ ತೈಲದ ಫ್ಯೂಚರ್ಸ್ ಬೆಲೆ ಪ್ರತಿ ಬ್ಯಾರೆಲ್ ಗೆ 1.60 ಡಾಲರ್ (ಶೇ. 1.55) ಕುಸಿದು 101.67 ಡಾಲರ್ ಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್ ಬೆಲೆಯೂ 1.56 ಡಾಲರ್ (ಶೇ. 1.34) ಇಳಿಕೆಯಾಗಿ ಪ್ರತಿ ಬ್ಯಾರೆಲ್ ಗೆ 115.16 ಡಾಲರ್ ಗೆ ತಲುಪಿದೆ.
ಸೌದಿ ಅರೇಬಿಯಾದಲ್ಲಿ ಹೌತಿಗಳ ದಾಳಿಯಿಂದ ಇಂಧನ ಪೂರೈಕೆಗೆ ಅಡಚಣೆಯಾಗುವ ಆತಂಕ ಮೂಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕಚ್ಚಾ ತೈಲದ ಬೆಲೆಗಳು ಸುಮಾರು 3 ಡಾಲರ್ ಏರಿಕೆಯಾಗಿದ್ದವು. ವಾರದ ವಹಿವಾಟಿನ ಅಂತ್ಯಕ್ಕೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ 6ರಷ್ಟು ಹೆಚ್ಚಳವಾಗಿದ್ದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಬೆಲೆ ಶೇ. 2.3ರಷ್ಟು ಏರಿಕೆಯಾಗಿತ್ತು.
Next Story




