ಕ್ಯೂಬಾ ಶೀಘ್ರದಲ್ಲೇ ಪತನಗೊಳ್ಳಲಿದೆ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್, ಜ.28: ಕ್ಯೂಬಾ ಪತನದ ಅಂಚಿನಲ್ಲಿದೆ. ಈ ಹಿಂದಿನಂತೆ ಇನ್ನು ಮುಂದೆ ಆ ರಾಷ್ಟ್ರಕ್ಕೆ ವೆನೆಝುವೆಲಾದಿಂದ ತೈಲ ಅಥವಾ ಆರ್ಥಿಕ ನೆರವು ದೊರಕುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ದೀರ್ಘಕಾಲದ ಬೆಂಬಲಿಗ ವೆನೆಝುವೆಲಾದಿಂದ ತೈಲ ಮತ್ತು ಹಣ ಕ್ಯೂಬಾಗೆ ತಲುಪದಂತೆ ತಡೆಯುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾ ಸೆರೆಹಿಡಿದ ಬಳಿಕ, ಮಾಜಿ ಉಪಾಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದ್ದು, ಅವರು ಅಮೆರಿಕಾದ ಮೇಲ್ವಿಚಾರಣೆಯಲ್ಲಿ ದೇಶದ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಕ್ಯೂಬಾವು ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಈ ತಿಂಗಳ ಆರಂಭದಲ್ಲಿ ನೀಡಿದ್ದ ಸಲಹೆಯನ್ನು ಕ್ಯೂಬಾ ಅಧ್ಯಕ್ಷರು ತಿರಸ್ಕರಿಸಿದ್ದು, ಒಪ್ಪಂದಕ್ಕೆ ಒತ್ತಾಯಿಸುವ ನೈತಿಕ ಅಧಿಕಾರ ಅಮೆರಿಕಾಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.





