ಗಗನಚುಂಬಿ ಕಟ್ಟಡ ಏರಿ ಸಾಹಸ ಮಾಡುತ್ತಿದ್ದ ʼಡೇರ್ಡೆವಿಲ್ʼ ಆಯತಪ್ಪಿ ಬಿದ್ದು ಸಾವು

Photo: ಡೇರ್ಡೆವಿಲ್
ಹಾಂಗ್ಕಾಂಗ್: ಎತ್ತರದ ಕಟ್ಟಡಗಳನ್ನು ಏರಿ ಸಾಹಸ ಮಾಡುತ್ತಿದ್ದ ರೆಮಿ ಲುಸಿಡಿ ಅವರು 68 ನೇ ಮಹಡಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಫ್ರೆಂಚ್ ಮೂಲದ 30 ವರ್ಷದ ಲುಸಿಡಿ ಅವರನ್ನು ಡೇರ್ಡೆವಿಲ್ ಎಂದೇ ಕರೆಯಲಾಗುತ್ತಿತ್ತು.
ಟ್ರೆಗುಂಟರ್ ಟವರ್ ಸಂಕೀರ್ಣವನ್ನು ಹತ್ತುತ್ತಿದ್ದಾಗ ಲುಸಿಡಿ ಆಯತಪ್ಪಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಜೆ ಆರು ಗಂಟೆ ಹೊತ್ತಿಗೆ, 40 ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಲುಸಿಡಿ ಹೇಳಿಕೊಂಡಿದ್ದು, ಆದರೆ, ಲುಸಿಡಿ ಹೇಳಿದ ವ್ಯಕ್ತಿ ತನಗೆ ಲುಸಿಡಿ ಅವರ ಪರಿಚಯವಿಲ್ಲ ಎಂದು ಹೇಳಿದ್ದರಿಂದ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿದ್ದರು. ಅದಾಗ್ಯೂ, ಲುಸಿಡಿ ಕಟ್ಟಡದೊಳಗೆ ಪ್ರವೇಶಿಸಿದ್ದಾರೆ.
Next Story