ಇಸ್ರೇಲ್ ನಗರದ ಮೇಲೆ ಇರಾನ್ ಕ್ಷಿಪಣಿ ಅಪ್ಪಳಿಸುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆ

PC : @AJEnglish
ಟೆಲ್ ಅವೀವ್: ಅಮೆರಿಕವು ಇರಾನ್ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಇಸ್ರೇಲ್ – ಇರಾನ್ ನಡುವಿನ ಉದ್ವಿಗ್ನತೆಯು ತೀವ್ರಗೊಂಡಿದೆ. ಇಸ್ರೇಲ್ ನ ಅಶ್ಡೋದ್ ನಗರದ ಮೇಲೆ ಇರಾನ್ ನ ಕ್ಷಿಪಣಿ ದಾಳಿಯ ದೃಶ್ಯವೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೆದ್ದಾರಿಯ ರಸ್ತೆಯ ಬಳಿಯಲ್ಲಿ ಕ್ಷಿಪಣಿ ಸ್ಟೋಟಗೊಂಡಾಗ ಕಲ್ಲುಗಳು ಮತ್ತು ಅವಶೇಷಗಳು ಗಾಳಿಯಲ್ಲಿ ಒಮ್ಮೆಲೇ ಚದುರುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ ಎಂದು Aljazeera ವರದಿ ತಿಳಿಸಿದೆ.
Dashcam video captured a huge explosion next to a road in Ashdod in Israel, as Iran launched a new wave of strikes following Israeli and US attacks on its nuclear sites. pic.twitter.com/Bf9lgABL3E
— Al Jazeera English (@AJEnglish) June 23, 2025
Next Story







