ಅಮೆರಿಕದ ಹೆದ್ದಾರಿಯಲ್ಲಿ ಕಾರಿಗೆ ಜಿಂಕೆ ಡಿಕ್ಕಿ; ಅಪಘಾತದಲ್ಲಿ ತೆಲಂಗಾಣ ಮೂಲದ ಯುವಕ ಮೃತ್ಯು

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ನ.21: ಅಮೆರಿಕದ ನ್ಯೂಯಾರ್ಕ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಜಿಂಕೆಯೊಂದು ಅಡ್ಡಬಂದು ಡಿಕ್ಕಿಯಾದ ಪರಿಣಾಮ ಕಾರು ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದು ಸಂಭವಿಸಿದ ನಾಲ್ಕು ವಾಹನಗಳ ಸರಣಿ ಅಪಘಾತದಲ್ಲಿ ಭಾರತದ ತೆಲಂಗಾಣ ಮೂಲದ 25 ವರ್ಷದ ಯುವಕ ಮೃತಪಟ್ಟಿದ್ದಾರೆ.
ಮೃತ ಯುವಕನನ್ನು ಸಾಯಿತೇಜ ಈರಮಲ್ಲ ಇಂದು ಗುರುತಿಸಲಾಗಿದೆ. ಇವರು ಮಾಂಟ್ಗೊಮೆರಿ ಕೌಂಟಿಯ ಕ್ಯಾನಜೋಹರಿ ಇಂಬಲ್ಲಿ ಹೆದ್ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದಾಗ ಜಿಂಕೆಯೊಂದು ಏಕಾಏಕಿ ರಸ್ತೆಗೆ ಅಡ್ಡಬಂದಿದೆ. ಕಾರು ಜಿಂಕೆಗೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನವು ಹೆದ್ದಾರಿಯ ಪಥದಲ್ಲೇ ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ವಾಹನಗಳು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ. ತೆಲಂಗಾಣದ ಮುನುಗೋಡು ಮೂಲದ ಸಾಯಿತೇಜ, ಅಮೆರಿಕದ ಯುಟಿಕಾದಲ್ಲಿ ವಾಸವಾಗಿದ್ದರು ಇಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story




