ಇರಾನ್ ಕದನ ವಿರಾಮ ಉಲ್ಲಂಘಿಸಿದೆ ಎಂದ ಇಸ್ರೇಲ್ ರಕ್ಷಣಾ ಸಚಿವ

Israeli soldiers work at the site struck by an Iranian missile strike (AP)
ಜೆರುಸಲೇಮ್: ಕದನ ವಿರಾಮ ಜಾರಿ ಬಳಿಕ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಇರಾನ್ ಕದನ ವಿರಾಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಹೇಳಿದ್ದಾರೆ.
ಇದರಿಂದಾಗಿ ಇರಾನ್ನ ಅರೆಸೈನಿಕ ಮತ್ತು ಸರಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿ ನಡೆಸುವುದನ್ನು ಪುನರಾರಂಭಿಸುವಂತೆ ಇಸ್ರೇಲ್ ಸೇನೆಗೆ ಸೂಚನೆ ನೀಡಿದ್ದೇನೆ ಎಂದು ಕಾಟ್ಝ್ ಹೇಳಿದ್ದಾರೆ.
ಕದನ ವಿರಾಮ ಜಾರಿಗೆ ಬಂದ ಮೂರು ಗಂಟೆಗಳಲ್ಲೇ ಇರಾನ್ ತನ್ನ ವಾಯುಪ್ರದೇಶಕ್ಕೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿದೆ.
ಇರಾನ್-ಇಸ್ರೇಲ್ ನಡುವಿನ 12 ದಿನಗಳ ಯುದ್ಧ ಕೊನೆಗೊಳಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಇಸ್ರೇಲ್ ಮತ್ತು ಇರಾನ್ ಒಪ್ಪಿಕೊಂಡ ಬಳಿಕ ಇಸ್ರೇಲ್ ಕಾಟ್ಝ್ ಈ ಹೇಳಿಕೆಯನ್ನು ನೀಡಿದ್ದಾರೆ.
Next Story





