'ಸ್ವಂತ ಸಮಾಧಿಯನ್ನು ತೋಡುತ್ತಿರುವ' ಇಸ್ರೇಲಿ ಒತ್ತೆಯಾಳುವಿನ ವೀಡಿಯೊ ಬಿಡುಗಡೆ

Image Source : X
ಗಾಝಾ, ಆ.3: ಭೂಗತ ಸುರಂಗವೊಂದರಲ್ಲಿ ಇರುವ ಸಣಕಲು ಶರೀರದ ಇಸ್ರೇಲಿ ಒತ್ತೆಯಾಳುವಿನ ವೀಡಿಯೊವನ್ನು ಹಮಾಸ್ ಬಿಡುಗಡೆಗೊಳಿಸಿದೆ.
ವ್ಯಕ್ತಿಯನ್ನು 24 ವರ್ಷದ ಎವ್ಯಾಟರ್ ಡೇವಿಡ್ ಎಂದು ಗುರುತಿಸಲಾಗಿದೆ. ಅಸ್ತಿಪಂಜರದಂತಾಗಿರುವ ಈತ ನಿಶ್ಯಕ್ತಿಯಿಂದ ಮಾತನಾಡಲೂ ಕಷ್ಟಪಡುತ್ತಿದ್ದು ಸಲಿಕೆಯೊಂದನ್ನು ಹಿಡಿದಿದ್ದಾನೆ. `ನಾನೀಗ ನನ್ನದೇ ಸಮಾಧಿಯನ್ನು ಅಗೆಯುತ್ತಿದ್ದೇನೆ. ದಿನ ಕಳೆದಂತೆಲ್ಲಾ ನನ್ನ ದೇಹ ಶಕ್ತಿ ಕಳೆದುಕೊಳ್ಳುತ್ತಿದ್ದು ನಾನು ನೇರವಾಗಿ ನನ್ನ ಸಮಾಧಿಗೇ ಹೋಗುತ್ತಿದ್ದೇನೆ. ನನ್ನ ಬಿಡುಗಡೆಗೆ, ಕುಟುಂಬದವರೊಂದಿಗೆ ಮನೆಯಲ್ಲಿ ಮಲಗುವ ಕಾಲ ಮಿಂಚಿಹೋಗುತ್ತಿದೆ' ಎಂದು ಅವರು ಕಷ್ಟಪಟ್ಟು ಹೇಳುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ. ವೀಡಿಯೊದಲ್ಲಿರುವುದು ಡೇವಿಡ್ ಎಂಬುದನ್ನು ಅವರ ಮನೆಯವರು ದೃಢಪಡಿಸಿರುವುದಾಗಿ ವರದಿಯಾಗಿದೆ.
Next Story







