ಮೋದಿ ನನ್ನ ಸ್ನೇಹಿತ, ಅವರ ರಾಜಕೀಯ ಜೀವನ ಹಾಳು ಮಾಡಲು ಬಯಸುವುದಿಲ್ಲ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ. ನಾನು ಅವರ ರಾಜಕೀಯ ವೃತ್ತಿಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ನನಗೆ ಭರವಸೆ ನೀಡಿದೆ. ಉಕ್ರೇನ್ ವಿರುದ್ಧದ ರಶ್ಯಾ ಯುದ್ಧವನ್ನು ತಡೆಯುವ ಪ್ರಯತ್ನಕ್ಕೆ ಇದು ದೊಡ್ಡ ಹೆಜ್ಜೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯ ದೀರ್ಘಾವಧಿಯ ಅಧಿಕಾರಾವಧಿ ಮತ್ತು ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಮೋದಿ ಒಬ್ಬ ಮಹಾನ್ ವ್ಯಕ್ತಿ. ಅವರು ಟ್ರಂಪ್ ಅವರನ್ನು ಪ್ರೀತಿಸುತ್ತಾರೆ. ನಾನು ಅವರ ರಾಜಕೀಯ ವೃತ್ತಿಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಟ್ರಂಪ್ ಮೋದಿಯ ಬಗ್ಗೆ ಹೇಳಿದರು.
ಭಾರತವನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ಇದು ಅದ್ಭುತ ದೇಶ ಮತ್ತು ಪ್ರತಿ ವರ್ಷವೂ ನಿಮಗೆ ಹೊಸ ನಾಯಕ ಸಿಗುತ್ತಾನೆ. ನನ್ನ ಸ್ನೇಹಿತ ಬಹಳ ಸಮಯದಿಂದ ಅಲ್ಲಿ ಅಧಿಕಾರದಲ್ಲಿದ್ದಾನೆ ಎಂದು ಹೇಳಿದರು.
ಟ್ರಂಪ್ ಶ್ವೇತಭವನದಲ್ಲಿ ಮಾತನಾಡುವ ವೇಳೆ, ನಾನು ಮೋದಿ ಜೊತೆ ರಷ್ಯಾದಿಂದ ಭಾರತ ತೈಲ ಖರೀದಿಸುವ ಬಗ್ಗೆ ಮಾತನಾಡಿದ್ದೇನೆ. ಮೋದಿ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಇದು ದೊಡ್ಡ ಹೆಜ್ಜೆ. ಚೀನಾ ಕೂಡ ಭಾರತವನ್ನು ಅನುಸರಿಸಬೇಕು ಎಂದು ಹೇಳಿದರು.







