ಸಭೆಗೆ ಮಮ್ದಾನಿ ಕೋರಿಕೆಯನ್ನು ನಾವು ಒಪ್ಪಿದ್ದೇವೆ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit: PTI
ವಾಷಿಂಗ್ಟನ್, ನ.20: ನ್ಯೂಯಾರ್ಕ್ನ ಚುನಾಯಿತ ಮೇಯರ್ ಝೊಹ್ರಾನ್ ಮಮ್ದಾನಿ ತನ್ನನ್ನು ಶುಕ್ರವಾರ(ನ.21) ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
`ನ್ಯೂಯಾರ್ಕ್ ನಗರದ ಕಮ್ಯುನಿಸ್ಟ್ ಮೇಯರ್ ಝೊಹ್ರಾನ್ ಮಮ್ದಾನಿ ನನ್ನನ್ನು ಭೇಟಿಯಾಗಲು ಬಯಸಿರುವುದಾಗಿ ಕೇಳಿಕೊಂಡರು. ಅದಕ್ಕೆ ನಾವು ಸಮ್ಮತಿಸಿದ್ದು ಈ ಭೇಟಿ ನ. 21ರಂದು ಶ್ವೇತಭವನದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಮಮ್ದಾನಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದರೆ, ರಿಪಬ್ಲಿಕನ್ ಅಭ್ಯರ್ಥಿಯಾಗಿ ಕರ್ಟಿಸ್ ಸ್ಲಿವಾ, ಸ್ವತಂತ್ರ ಅಭ್ಯರ್ಥಿಯಾಗಿ ಆಂಡ್ರ್ಯೂ ಕ್ಯುಮೊ ಕಣದಲ್ಲಿದ್ದರು. `ಮಮ್ದಾನಿಯ ಗೆಲುವು ನ್ಯೂಯಾರ್ಕ್ ನಗರಕ್ಕೆ ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವಿಪತ್ತು ಆಗಲಿದೆ' ಎಂದು ಪ್ರಚಾರದ ಸಂದರ್ಭ ಟ್ರಂಪ್ ಎಚ್ಚರಿಕೆ ನೀಡಿದ್ದರು.





