ಎಪ್ಸ್ಟೀನ್ ಫೈಲ್ ಗಳ ಬಿಡುಗಡೆ ಕುರಿತ ಮಸೂದೆಗೆ ಟ್ರಂಪ್ ಸಹಿ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ನ.20: ತನ್ನದೇ ಪಕ್ಷದ ಸದಸ್ಯರ ತೀವ್ರ ಒತ್ತಡಕ್ಕೆ ಮಣಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಫೈಲ್ ಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಬುಧವಾರ ಸಹಿ ಹಾಕಿದ್ದಾರೆ.
` ನಮ್ಮ ಅದ್ಭುತ ಗೆಲುವಿನಿಂದ ಗಮನಗಳನ್ನು ಬೇರೆಡೆ ಸೆಳೆಯಲು ಡೆಮಾಕ್ರಟಿಕ್ ಪಕ್ಷ ಎಪ್ಸ್ಟೀನ್ ಪ್ರಕರಣವನ್ನು ಬಳಸಿಕೊಂಡಿದೆ. ಆದರೆ ಇದು ರಿಪಬ್ಲಿಕನ್ ಪಕ್ಷಕ್ಕಿಂತಲೂ ಅವರ ಮೇಲೆಯೇ ಹೆಚ್ಚು ಪರಿಣಾಮ ಬೀರಲಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Next Story





